ಸಿ.ಟಿ ರವಿ ಹೇಳಿಕೆಗೆ ಸಾಕ್ಷ್ಯಾಧಾರ ಇವೆ: ತನಿಖೆ ನಡೆಯುತ್ತೆ-ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು,ಡಿಸೆಂಬರ್,23,2024 (www.justkannada.in): ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಎಂಎಲ್ ಸಿ ಸಿ.ಟಿ ರವಿ ಹೇಳಿಕೆಗೆ ಸಾಕ್ಷ್ಯಾಧಾರಗಳಿವೆ. ಈ  ಹೇಳಿಕೆ ಬಗ್ಗೆ ತನಿಖೆ ನಡೆಯುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಈ ಕುರಿತು ಇಂದು ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್,  ಸಿಟಿ ರವಿ ಹೇಳಿಕೆಗೆ ಬಿಜೆಪಿ ಯಾಕೆ ಖಂಡಿಸುತ್ತಿಲ್ಲ. ಸಿ.ಟಿ ರವಿ ಹೇಳಿಕೆಗೆ ಸಾಕ್ಷ್ಯಾಧಾರ ಇವೆ. ಈ ಬಗ್ಗೆ ತನಿಖೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಸಿಟಿ ರವಿಯನ್ನ ಫೇಕ್ ಎನ್ ಕೌಂಟರ್ ಮಾಡುತ್ತಿದ್ದರು ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ತಿರುಗೇಟು ಕೊಟ್ಟ ಸಚಿವ ದಿನೇಶ್ ಗುಂಡೂರಾವ್, ಇದೆಲ್ಲಾ ದಾರಿ ತಪ್ಪಿಸುವಂತಹ ಹೇಳಿಕೆಗಳು. ಜೋಶಿ ಒಬ್ಬರು ಸಿನೀಯರ್ ಲೀಡರ್.  ಪ್ರಚೋದನಾಕಾರಿ ಹೇಳಿಕೆ ನೀಡುವುದು ಒಳ್ಳೆಯದಲ್ಲ ಎಂದು ಕಿಡಿಕಾರಿದರು.

Key words: CT Ravi, statement, investigation, Minister, Dinesh Gundu Rao