ಮಾಜಿ ಸಿಎಂ ಎಸ್‌.ಎಂ. ಕೃಷ್ಣ ಅವರಿಗೆ ನುಡಿ ನಮನ: ನಾಳೆ ಪೂರ್ವಭಾವಿ ಸಭೆ

ಮೈಸೂರು,ಡಿಸೆಂಬರ್,23,2024 (www.justkannada.in): ಮಾಜಿ ಮುಖ್ಯಮಂತ್ರಿ, ರಾಜಕೀಯ ಮುತ್ಸದ್ಧಿ ಎಸ್.ಎಂ ಅವರಿಗೆ ನುಡಿ ನಮನ ಸಲ್ಲಿಸುವ ಸಲುವಾಗಿ ನಾಳೆ ಪೂರ್ವಭಾವಿ ಸಭೆ ನಡೆಯಲಿದೆ.

ನಾಳೆ (ಮಂಗಳವಾರ) ಸಂಜೆ 4.30ಕ್ಕೆ ಗಂಗೋತ್ರಿ ಬಡಾವಣೆ, ಮಂಡ್ಯ ಜಿಲ್ಲಾ ಬಳಗದ ಸಭಾಂಗಣದಲ್ಲಿ ನುಡಿನಮನ ಪೂರ್ವಭಾವಿ ಸಭೆ ನಡೆಯಲಿದೆ. ಮೈಸೂರು ಮಹಾನಗರ ಮತ್ತು ಜಿಲ್ಲೆಯ ನಾಗರೀಕ ವೇದಿಕೆ ಹಾಗೂ ಮಂಡ್ಯ ಜಿಲ್ಲಾ ಬಳಗ ಸಂಯುಕ್ತವಾಗಿ ಈ ಸಭೆಯನ್ನು ಕರೆದಿದೆ.

ರಾಜ್ಯದ ಮುಖ್ಯಮಂತ್ರಿಯಾಗಿದ್ದ ಹಾಗೂ ಭಾರತ ಸರ್ಕಾರದ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ್ದ ಎಸ್.ಎಂ. ಕೃಷ್ಣರವರಿಗೆ ಶ್ರದ್ದಾಂಜಲಿ ಅರ್ಪಿಸುವ ಸಲುವಾಗಿ ಶ್ರದ್ಧಾಂಜಲಿ ಸಭೆಯ ನಡಾವಳಿಗಳನ್ನು ಚರ್ಚಿಸಲು ಪೂರ್ವಭಾವಿ ಸಭೆ ಕರೆಯಲಾಗಿದೆ.

ಸಭೆಯಲ್ಲಿ ಪ್ರೊ. ಕೆ.ಟಿ. ವೀರಪ್ಪ, ಪ್ರೊ. ಬಿ.ಕೆ. ಚಂದ್ರಶೇಖರಗೌಡ, ಜಯರಾಮು ಕೀಲಾರ್ ನೀಲಕಂಠನಹಳ್ಳಿ ತಮ್ಮಣ್ಣಗೌಡ, ಕೆ.ವಿ. ಮಲ್ಲೇಶ್ ವಿಕ್ರಾಂತ್ ಪಿ. ದೇವೇಗೌಡ, ಕೆ.ವಿ. ಶ್ರೀಧರ್ ಉಪಸ್ಥಿತರಿರಲಿದ್ದಾರೆ.

Key words: Tribute, former CM, S.M. Krishna, mysore, meeting