ಸರ್ಕಾರದಿಂದ ಕಾನೂನು ದುರುಪಯೋಗ: ರಾಜ್ಯದ ಪೊಲೀಸರಿಗಿದ್ದ ಗೌರವ ಮಣ್ಣುಪಾಲು- ಕೇಂದ್ರ ಸಚಿವ ಹೆಚ್.ಡಿಕೆ

ಹಾಸನ, ಡಿಸೆಂಬರ್, 23,2024 (www.justkannada.in): ರಾಜ್ಯ ಸರ್ಕಾರ ಕಾನೂನು ದುರುಪಯೋಗ ಪಡಿಸಿಕೊಳ್ಳುತ್ತಿದ್ದು,  ರಾಜ್ಯದ ಪೊಲೀಸರಿಗಿದ್ದ ಗೌರವ ಮಣ್ಣುಪಾಲು ಮಾಡಲಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ,  ಕರ್ನಾಟಕದ ಪೊಲೀಸ್ ಇಲಾಖೆಗೆ  ದೇಶದಲ್ಲೇ ವಿಶೇಷವಾದ ಗೌರವಯುತ ಸ್ಥಾನ ಇದೆ. ಆ ಗೌರವವನ್ನು ಮಣ್ಣುಪಾಲು ಮಾಡುತ್ತಿದ್ದಾರೆ. ಬೇಕಾದಂತೆ ಕೇಸ್ ಗಳನ್ನ ಬುಕ್ ಮಾಡುತ್ತಿದ್ದಾರೆ. ಸರ್ಕಾರದಿಂದ ಕಾನೂನಿನ ದುರುಪಯೋಗ ಉಲ್ಲಂಘನೆಯಾಗುತ್ತಿದೆ . ನಾನು ಸಂಪೂರ್ಣವಾಗಿ ಪೊಲೀಸ್ ಇಲಾಖೆ ದೂಷಿಸಲ್ಲ. ಕಾನೂನು ಬಾಹಿರದಂತಹ ತೀರ್ಮಾನಗಳಾಗುತ್ತಿವೆ.  ರಾಜಕಾರಣ ಯಾವ ದಿಕ್ಕಿಗೆಗೆ ಹೋಗುತ್ತಿದೆ. ಸಿಟಿ ರವಿಯವರನ್ನ ರಾತ್ರಿಯೆಲ್ಲಾ ಸುತ್ತಿಸೋದು ಬೇಕಿತ್ತಾ..? ಎಂದು ಪ್ರಶ್ನಿಸಿರು.

ಇದಕ್ಕೆಲ್ಲ ಕಾಲವೇ ಉತ್ತರ ಕೊಡುತ್ತದೆ. ರಾಜ್ಯದಲ್ಲಿ ಈ ಸರ್ಕಾರ ಬಂದ ನಂತರ ಏನೇನು ನಡೆಯುತ್ತಿದೆ ಎಂಬುದನ್ನು ಗಮನಿಸಿದ್ದೇನೆ.  ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ರಾಜಕಾರಣ ಯಾವ ರೀತಿ ಹೋಗಬಹುದು ಅನ್ನುವುದಕ್ಕೆ ವೇದಿಕೆ ಸಿದ್ದ ಮಾಡುತ್ತಿದ್ದಾರೆ  ಎಂದು ಹೆಚ್.ಡಿಕೆ ಹರಿಹಾಯ್ದರು.

Key words: Government, misuses, law, Union Minister, HDK