ಸಿಐಡಿಯಿಂದ ನ್ಯಾಯ ಸಿಗಲ್ಲ; ನ್ಯಾಯಾಂಗ ತನಿಖೆಗೆ MLC ಸಿ.ಟಿ.ರವಿ ಆಗ್ರಹ

ಚಿಕ್ಕಮಗಳೂರು,ಡಿಸೆಂಬರ್, 24,2024 (www.justkannada.in): ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಪ್ರಕರಣವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಸಿಐಡಿ ತನಿಖೆಗೆ ನೀಡಿದ್ದು ಇದಕ್ಕೆ ವಿಧಾನಪರಿಷತ್ ಬಿಜೆಪಿ ಸದಸ್ಯ ಸಿ.ಟಿ ರವಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಿ.ಟಿ ರವಿ, ಸಿಐಡಿ ತನಿಖೆಯಿಂದ ನಮಗೆ ನ್ಯಾಯ ಸಿಗಲ್ಲ, ಈ ಬಗ್ಗೆ ನ್ಯಾಯಾಂಗ ತನಿಖೆಯಾಗಲಿ ಎಂದು ಒತ್ತಾಯಿಸಿದ್ದಾರೆ.

ಒತ್ತಡವಿಲ್ಲದೇ ಕೆಲಸ ಮಾಡಿದರೆ ರಕ್ಷಣೆ ಸಿಗಬಹುದು. ಅದನ್ನು ಸಿಐಡಿ ಅಲ್ಲ, ಓರ್ವ ಕಾನ್ಸ್ ಟೇಬಲ್ ಕೂಡ ಮಾಡಬಹುದಾಗಿದೆ. ಆದರೆ ಒತ್ತಡವಿದ್ದಾಗ ಸಿಐಡಿಯಿಂದ ನ್ಯಾಯ ಸಿಗುವ ಸಾಧ್ಯತೆ ಇಲ್ಲ. ನ್ಯಾಯ ಸಮ್ಮತವಾಗಿದ್ದರೆ ಸಿಐಡಿಗೆ ನೀಡಬೇಕಿರುವ ಅಗತ್ಯವಿಲ್ಲ ಪ್ರಕರಣ ಕುರಿತು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನಿಖೆಯಾಗಲಿ ಎಂದು ಆಗ್ರಹಿಸಿದರು.

Key words: Justice, CID, MLC, CT Ravi, judicial investigation