ಸಿಟಿ ರವಿ ಕೇಸ್ ಸಿಐಡಿಗೆ ವಹಿಸಿರೋದು ನಮ್ಮ ವ್ಯಾಪ್ತಿಗೆ ಬರಲ್ಲ-ಸಭಾಪತಿ ಬಸವರಾಜ ಹೊರಟ್ಟಿ

ಹುಬ್ಬಳ್ಳಿ,ಡಿಸೆಂಬರ್,24,2024 (www.justkannada.in): ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಎಂಎಲ್ ಸಿ ಇಟಿ ರವಿ ಆಕ್ಷೇಪಾರ್ಹ ಪದ ಬಳಕೆ ಪ್ರಕರಣವನ್ನ ಸಿಐಡಿ ತನಿಖೆಗೆ ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ. ಅದು ನಮ್ಮ ವ್ಯಾಪ್ತಿಗೆ  ಬರಲ್ಲ ಎಂದಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಪ್ರಕರಣ ಸಿಐಡಿಗೆ ಕೊಟ್ಟಿರುವ ಬಗ್ಗೆ ಗೃಹ ಸಚಿವರು ತಿಳಿಸಿದರು. ಸಿಐಡಿಗೆ ವಹಿಸಿರುವುದು ರಾಜ್ಯ ಸರ್ಕಾರದ ವ್ಯಾಪ್ತಿ.   ಅದು ನಮ್ಮ  ವ್ಯಾಪ್ತಿಗೆ ಬರಲ್ಲ. ಅದು ಸದನದ ಮುಂದೆ ಆಗಿರುವ ಘಟನೆ. ಸರ್ಕಾರಕ್ಕೆ ಸಂಪೂರ್ಣ ಅಧಿಕಾರವಿರುತ್ತದೆ. ಸದನ ಮುಂದೂಡಿದ ಬಳಿಕ ಘಃಟನೆ ಆಗಿದೆ.  ಅವಶ್ಯಕತೆ ಇದ್ದರೇ ಇಲ್ಲಿನ ಅಧಿಕಾರಿಗಳನ್ನ ವಿಚಾರಣೆಗೆ ಕಳುಹಿಸುತ್ತೇವೆ. ನಮ್ಮ ಕಾನೂನು ವ್ಯಾಪ್ತಿ ಬಿಟ್ಟು ನಾವು ಏನು ಮಾಡುವುದಿಲ್ಲ ಎಂದರು.

ಸ್ಥಳ ಮಹಜರು ವಿಚಾರದ ಬಗ್ಗೆ ಚರ್ಚೆ ಮಾಡುತ್ತೇವೆ.  ಆ ರೀತಿ  ವಾತಾವರಣ ನಿರ್ಮಾಣವಾದರೇ ಅವಕಾಶ ನೀಡಬೇಕು. ನಮ್ಮ ಕಾರ್ಯದರ್ಶಿ ಕಾನೂನು ತಜ್ಞರ ಜೊತೆ  ಮಾಡುತ್ತಾರೆ.

Key words: CT Ravi, case, CID, Basavaraj Horatti