ವಂಚನೆ ಕೇಸ್: ಹಣ, ಚಿನ್ನದ ಉಂಗುರ, ಬ್ರಾಸ್ ಲೆಟ್ ವಾಪಾಸ್ ನೀಡಿದ ಮಾಜಿ ಸಚಿವ ವರ್ತೂರು ಪ್ರಕಾಶ್

ಬೆಂಗಳೂರು, ಡಿಸೆಂಬರ್,24,2024 (www.justkannada.in)  ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶ್ವೇತಗೌಡ ಉಡುಗೊರೆಯಾಗಿ ಕೊಟ್ಟಿದ್ದ  ನಗದು ಹಣ, ಚಿನ್ನದ ಉಂಗುರ, ಬ್ರಾಸ್ ಲೆಟ್ ಗಳನ್ನು ಮಾಜಿ ಸಚಿವ ವರ್ತೂರು ಪ್ರಕಾಶ್ ಅವರು ಪೊಲೀಸರಿಗೆ ವಾಪಾಸ್ ನೀಡಿದ್ದಾರೆ.

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಭಾರತಿ ನಗರ ಪೊಲೀಸ್ ಠಾಣೆಗೆ ಆಗಮಿಸಿದ್ದ ವರ್ತೂರು ಪ್ರಕಾಶ್‌, ಎಸಿಪಿ ಗೀತಾ ಎದುರು ವಿಚಾರಣೆ ಎದುರಿಸಿದರು.  ಆರೋಪಿ ಶ್ವೇತಾ ಗೌಡ ಗಿಫ್ಟ್ ಆಗಿ ನೀಡಿದ್ದ  12.50 ಲಕ್ಷ ನಗದು ಹಣ, ಮೂರು ಬ್ರಾಸ್ ಲೆಟ್, 1 ಚಿನ್ನದ ಉಂಗುರಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ವಿಚಾರಣೆ ಬಳಿಕ  ಮಾಧ್ಯಮಗಳ ಜೊತೆ ಮಾತನಾಡಿದ ವರ್ತೂರು ಪ್ರಕಾಶ್, ಶ್ವೇತಾ ಗೌಡ 6 ತಿಂಗಳ ಹಿಂದಷ್ಟೇ ಪರಿಚಯ. ಆಕೆ ಹೀಗೆ ಮಾಡುತ್ತಾಳೆ ಎಂದು ನನಗೆ ಗೊತ್ತಿರಲಿಲ್ಲ. ನನಗೂ ಆಕೆಗೂ ಯಾವುದೇ ಸಂಬಂಧವಿಲ್ಲ.  ಉಡುಗೊರೆ ಅಂತ ಶ್ವೇತಾ ಗೌಡ ನನಗೆ ಕೆಲ ಒಡವೆ ನೀಡಿದ್ದಳು. ನನ್ನ ಹೆಸರು ಬಳಸಿಕೊಂಡು ಆಕೆ ಚಿನ್ನಾಭರಣ ಖರೀದಿ ಮಾಡಿದ್ದಾಳೆ. ಚಿನ್ನದ ಅಂಗಡಿಯವರು 2 ಕೋಟಿ ರೂ. ಚಿನ್ನಾಭರಣವನ್ನು ಆಕೆಗೆ  ನೀಡಿದ್ದು,  ಅದು ಹೇಗೆ ಕೊಟ್ಟರು? ಗೊತ್ತಿಲ್ಲ. ನನ್ನ ತರಹ ಹಲವು ರಾಜಕಾರಣಿಗಳ ಹೆಸರು, ಫೋಟೋ ತೆಗೆದುಕೊಂಡು ವಂಚನೆ ಮಾಡಿದ್ದಾಳೆ ಎಂದು ತಿಳಿಸಿದರು.

Key words: Fraud case,  Former minister, Varthur Prakash, money, gold ring