ಶಿವರಾಜ್ ಕುಮಾರ್ ಅವರಿಗೆ ನಡೆದ ಆಪರೇಷನ್ ಯಶಸ್ವಿ- ಗೀತಾ ಶಿವರಾಜ್ ಕುಮಾರ್

ನವದೆಹಲಿ,ಡಿಸೆಂಬರ್,25,2024 (www.justkannada.in):  ನಟ ಶಿವರಾಜ್ ಕುಮಾರ್ ಅವರಿಗೆ ನಡೆದಿರುವ ಅಪರೇಷನ್ ಯಶಸ್ವಿಯಾಗಿದೆ.

ಈ ಕುರಿತು ಗೀತಾ ಶಿವರಾಜ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.  ಶಿವರಾಜ್ ಕುಮಾರ್ ಅವರಿಗೆ  ನಡೆದ ಅಪರೇಷನ್ ಯಶಸ್ವಿಯಾಗಿದೆ.  ಅಭಿಮಾನಿಗಳು ಹೇಗೆ ದೇವರೋ  ಅದೇ ರೀತಿ ಬಂದು ಡಾಕ್ಟರ್ಸ್ ಗಳು ಕೂಡ ದೇವರು. ದೇವರ ರೀತಿ ಬಂದು ಅಪರೇಷನ್ ಮಾಡಿದ್ದಾರೆ ಸದ್ಯ ಶಿವರಾಜ್ ಕುಮಾರ್ ಐಸಿಯುನಲ್ಲಿ ಇದ್ದಾರೆ  ಶೀಘ್ರದಲ್ಲೇ ನಿಮ್ಮ ಜೊತೆ ಮಾತನಾಡಲಿದ್ದಾರ ಎಂದು ಮಯಾಮಿ ಆಸ್ಪತ್ರೆಯಲ್ಲಿ ತಿಳಿಸಿದರು.

ಕಳೆದ ಕೆಲವು ದಿನಗಳಿಂದ ನಟ ಶಿವರಾಜ್ ಕುಮಾರ್‌ ಅವರ ಅನಾರೋಗ್ಯ ಸಮಸ್ಯೆಯು ಡಾ. ರಾಜ್‌ಕುಟುಂಬದಲ್ಲಿ ಹಾಗೂ ಶಿವರಾಜ್ ಕುಮಾರ್‌ ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿತ್ತು.

ನಟ ಶಿವರಾಜ್ ಕುಮಾರ್‌ ಅವರು ಸಹ ಆಪರೇಷನ್‌ನ ಬಗ್ಗೆ ಸಣ್ಣ ಆತಂಕ ಇದೆ ಎಂದು ಹೇಳಿದ್ದರು. ಈಗ ಆ ಆತಂಕಗಳು ಕೊನೆಯಾಗಿವೆ.  ನಿನ್ನೆ ಸಂಜೆ ಅಮೆರಿಕದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆದಿದೆ

ನಟ ಶಿವರಾಜ್‌ಕುಮಾರ್‌ ಅವರಿಗೆ ಕ್ಯಾನ್ಸರ್ ಸಮಸ್ಯೆ ಇರುವುದು ವರದಿಯಾಗಿತ್ತು. ಈ ವಿಷಯವನ್ನು ಶಿವರಾಜ್‌ ಕುಮಾರ್‌ ಅವರೇ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು. ಅಮೆರಿಕದ ಪ್ರತಿಷ್ಠಿತ ಫ್ಲೋರಿಡಾದ್ಲಿರುವ ಮಿಯಾಮಿ ಕ್ಯಾನ್ಸರ್ ಇನ್​ಸ್ಟಿಟ್ಯೂಟ್​ನಲ್ಲಿ ಸರ್ಜರಿ ನಡೆದಿದೆ.

Key words: Actor, Shivaraj kumar, operation, America