ವಿಜಯಪುರ,ಡಿಸೆಂಬರ್,25,2024 (www.justkannada.in) : ಸಿಟಿ ರವಿ ಪ್ರಕರಣ ಸಂಬಂಧ ಸಿಐಡಿ ತನಿಖೆ ಮೇಲೆ ನಮಗೆ ವಿಶ್ವಾಸವಿಲ್ಲ. ಪ್ರಕರಣದ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಿಟಿ ರವಿ ಅವರ ಪ್ರಕರಣವನ್ನ ಸಿಐಡಿಗೆ ವರ್ಗಾವಣೆ ಮಾಡಲಾಗಿದ್ದು ಸಿಐಡಿ ತನಿಖೆ ಮೇಲೆ ನಮಗೆ ವಿಶ್ವಾಸವಿಲ್ಲ. ಸಿಟಿ ರವಿ ಮೇಲೆ ಎನ್ ಕೌಟಂಟರ್ ಗೆ ಪ್ಲಾನ್ ಮಾಡಲಾಗಿತ್ತು ಎಂದು ಆರೋಪಿಸಿದರು.
ಬೆಳಗಾವಿಯಲ್ಲಿ ಕಾಂಗ್ರೆಸ್ ಶತಮಾನೋತ್ಸವ ಕುರಿತು ಪ್ರತಿಕ್ರಿಯಿಸಿದ ಶಾಸಕ ಯತ್ನಾಳ್, ಇದು ನಕಲಿ ಕಾಂಗ್ರೆಸ್ ಅಧಿವೇಶನ. ಅಧಿವೇಶನದಲ್ಲಿ ಇರೊರು ನಕಲಿ ಗಾಂಧಿಗಳು. ಹೆಸರು ಇದ್ದ ಮಾತ್ರಕ್ಕೆ ಪಾವಿತ್ರ್ಯತೆ ಬರಲ್ಲ. ಬಾಬಾಸಾಹೇಬ್ ಅಂಬೇಡ್ಕರ್ ಸ್ಮರಣೆ ಮಾಡಲ್ಲ. ಗಾಂಧಿ ಸ್ಮರಣೆ ಮಾತ್ರ ಮಾಡುತ್ತಾರೆ. ಸನಾತನ ಧರ್ಮ ಉಳಿದರೇ ಮಾತ್ರ ಸಂವಿಧಾನ ಉಳಿಯಲು ಸಾಧ್ಯ ಎಂದರು.
Key words: CT Ravi case, CID, investigation, MLA, Yatnal