ಜಮ್ಮುಕಾಶ್ಮೀರ,ಡಿಸೆಂಬರ್,25,2024 (www.justkannada.in): ಸೇನಾವಾಹನ ಕಂದಕಕ್ಕೆ ಉರುಳಿಬಿದ್ದು ಕರ್ನಾಟಕದ ಮೂವರು ಯೋಧರು ಸೇರಿ ಐವರು ಯೋಧರು ಹುತಾತ್ಮರಾಗಿರುವ ಘಟನೆ ಜಮ್ಮುಕಾಶ್ಮೀರದಲ್ಲಿ ನಡೆದಿದೆ.
ಜಮ್ಮುಕಾಶ್ಮೀರದ ಮೆಂಧರ್ ಸೆಕ್ಟರ್ ನ ಪೂಂಚ್ ಜಿಲ್ಲೆಯ ಬಲ್ನೋಯಿ ಬಳಿ ಈ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆ ಮುಧೋಳದ ಮಹೇಶ್ ಮಾರಿಕೊಂಡ್, ಉಡುಪಿ ಜಿಲ್ಲೆ ಕುಂದಾಪುರದ ಅನೂಪ್, ಚಿಕ್ಕೋಡಿ ದಯಾನಂದ್ ಮೃತಪಟ್ಟ ಮೂವರು ಯೋಧರು.
ಕರ್ತವ್ಯಕ್ಕೆಂದು ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಸೇನಾವಾಹನ 350 ಅಡಿ ಕಂದಕಕ್ಕೆ ಬಿದ್ದು ಈ ಘಟನೆ ಸಂಭವಿಸಿದೆ. ಹುತಾತ್ಮ ಅನೂಪ್ ಅವರು ಕಳೆದ 13 ವರ್ಷಗಳಿಂದ ಸೇನೆಯಲ್ಲಿದ್ದರು. ಅವರಿಗೆ 2 ವರ್ಷದ ಪುಟ್ಟಮಗು ಇದೆ.
Key words: three soldiers, Karnataka, death, army vehicle, falls