ಬೆಳಗಾವಿ,ಡಿಸೆಂಬರ್,25,2024 (www.justkannada.in): ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಆರೋಪ ವಿಚಾರ ಸಂಬಂಧ ಎಂಎಲ್ ಸಿ ಸಿ.ಟಿ ರವಿ ಅವರನ್ನ ಬಂಧಿಸಿ ಸುತ್ತಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ತಲೆದಂಡವಾಗಿದೆ.
ಕರ್ತವ್ಯ ಲೋಪದಡಿ ಖಾನಾಪುರ ಪೊಲೀಸ್ ಠಾಣೆಯ ಸಿಪಿಐ ಮಂಜುನಾಥ್ ನಾಯಕ್ ಅವರನ್ನ ಅಮಾನತು ಮಾಡಿ ಬೆಳಗಾವಿ ಉತ್ತರ ವಲಯದ ಐಜಿಪಿ ವಿಕಾಸ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಬಿಜೆಪಿ ನಾಯಕರನ್ನು ಠಾಣೆಯೊಳಗೆ ಬಿಟ್ಟಿದ್ದಕ್ಕೆ ಅಮಾನತು ಮಾಡಲಾಗಿದೆ ಎನ್ನಲಾಗಿದೆ.
ಸಿಟಿ ರವಿ ಬಂಧನ ನಂತರ ಬಿಜೆಪಿ ನಾಯರಕನ್ನ ಠಾಣೆಯೊಳಗೆ ಬಿಟ್ಟಿದ್ದರು. ಈ ವೇಳೆ ಖಾನಾಪುರ ಠಾಣೆಯಲ್ಲಿ ಬಿಜೆಪಿ ನಾಯಕರು ಸಭೆ ಮಾಡಿದ್ದರು. ಆಗ ಕಮಿಷನರ್ ಯಡಾಮಾರ್ಟಿನ, ಡಿಸಿಪಿ ರೋಹನ್ ಇದ್ದರು. ಕಮಿಷನರ್ ಅನುಮತಿ ಮೇರೆಗೆ ಬಿಜೆಪಿ ನಾಯಕರನ್ನ ಠಾಣೆಯೊಳಗೆ ಬಿಟ್ಟಿದ್ದರು ಎನ್ನಲಾಗಿದೆ. ಕಮಿಷನರ್
ಸಿಟಿ ರವಿ ಭೇಟಿಗೆ ಬಿಜೆಪಿ ನಾಯಕರಿಗೆ ಅನುಮತಿ ಕೊಟ್ಟಿದ್ದಕ್ಕೆ ಸಿಪಿಐ ಮಂಜುನಾಥ್ ಅವರನ್ನ ಅಮಾನತು ಮಾಡಲಾಗಿದೆ ಎನ್ನಲಗುತ್ತಿದೆ.
Key words: CT Ravi, arrest, case, CPI, suspended