70ಕ್ಕೂ ಹೆಚ್ಚು ಪ್ರಯಾಣಿಕರಿದ್ದ ವಿಮಾನ ಪತನ

ಅಕ್ಟೌ ನಗರ,ಡಿಸೆಂಬರ್,25,2024 (www.justkannada.in):  ಸುಮಾರು 70ಕ್ಕೂ ಹೆಚ್ಚು ಜನರನ್ನ ಹೊತ್ತೊಯ್ಯುತ್ತಿದ್ದ ವಿಮಾನ ಪತನಗೊಂಡಿರುವ ಘಟನೆ ಕಝಾಕಿಸ್ತಾನದ ಅಕ್ಟೌ ನಗರದ ಬಳಿ ನಡೆದಿದೆ.

ಅಜರ್‌ಬೈಜಾನ್ ಏರ್‌ಲೈನ್ಸ್ ವಿಮಾನ ಪತನವಾಗಿದೆ. ವಿಮಾನದಲ್ಲಿ 72 ಜನರಿದ್ದರು ಎನ್ನಲಾಗಿದ್ದು, ಹಲವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ವಿಮಾನ ಬಾಕುದಿಂದ ರಷ್ಯಾದ ಚೆಚೆನ್ಯಾದ ಗ್ರೋಜ್ನಿಗೆ ತೆರಳುತ್ತಿತ್ತು. ಆದರೆ ಗ್ರೋಜಿಯಲ್ಲಿ ದಟ್ಟ ಮಂಜಿನಿಂದಾಗಿ ಮಾರ್ಗವನ್ನು ಬದಲಾಯಿಸಲಾಯಿತು

ಅಪಘಾತದ ಮೊದಲು, ವಿಮಾನವು ವಿಮಾನ ನಿಲ್ದಾಣದ ಮೇಲೆ ಹಲವಾರು ಬಾರಿ ಸುತ್ತು ಹಾಕಿದ್ದು ನಂತರ ಪತನಗೊಂಡಿದೆ.

Key words: Plane, crashes, 70 passengers