ಬೆಂಗಳೂರು,ಡಿಸೆಂಬರ್,25,2024 (www.justkannada.in): ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಮುನಿರತ್ನ, ನನ್ನ ಕೊಲೆಯಾದರೇ ಅದಕ್ಕೆ ಡಿ.ಕೆ ಶಿವಕುಮಾರ್, ಡಿ.ಕೆ ಸುರೇಶ್ ಹಾಗೂ ಕುಸುಮಾ ಕಾರಣ ಎಂದು ಹೇಳಿದ್ದಾರೆ.
ಲಕ್ಷ್ಮೀ ದೇವಿ ನಗರ ವಾರ್ಡ್ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚಾರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ವೇಳೆ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆಯಲಾಗಿತ್ತು.
ಘಟನೆ ಬಳಿಕ ಮಾತನಾಡಿರುವ ಶಾಸಕ ಮುನಿರತ್ನ, ನನ್ನ ಕೊಲೆಗೆ ಯತ್ನ ನಡೆಯುತ್ತದೆ ಎಂದು ಪೊಲೀಸರು ನನಗೆ ಹೇಳಿದ್ದರು. ಪೊಲೀಸರು ನನಗೆ ಮಾಹಿತಿ ನೀಡಿದ ತಕ್ಷಣ ಈ ಘಟನೆ ಆಗಿದೆ. ಈ ಹಿಂದೆಯೂ ರಾಜೀನಾಮೆ ಕೊಡಿ ಎಂದು ನನಗೆ ಬೆದರಿಕೆ ಹಾಕಿದ್ದರು. ರಾಜೀನಾಮೆ ಕೊಟ್ರೆ ಜೀವ ಉಳಿಯುತ್ತೆ ಎಂದು ಬೆದರಿಕೆ ಹಾಕಿದ್ದರು.
ಹೀಗಾಗಿ ನನ್ನ ಜೀವಕ್ಕೆ ಅಪಾಯ ಎಂದು ಪ್ರಧಾನಿ ಮೋದಿಗೆ ದೂರು ನೀಡಿದ್ದೇನೆ. ನನ್ನ ಕೊಲೆ ಆಗೋದು ಖಂಡಿತ. ನನ್ನ ಮೇಲೆ ಆ್ಯಸಿಡ್ ತುಂಬಿದ ಮೊಟ್ಟೆ ಎಸೆದಿದ್ದಾರೆ. ಆದರೆ ಪೊಲೀಸರು ಇಲ್ಲದಿದ್ದರೇ ನನ್ನ ಕೊಲೆ ಆಗುತ್ತಿತ್ತು ನನ್ನ ಕೊಲೆ ಆದರೇ ಡಿಕೆ ಶಿವಕುಮಾರ್, ಡಿಕೆ ಸುರೇಶ್, ಕುಸುಮಾ ಕಾರಣ ಎಂದು ತಿಳಿಸಿದರು.
Key words: my murder, MLA, Munirathna, attack