ಸಿ.ಟಿ ರವಿ ಕೇಸ್: ಸಿಪಿಐ ಸಸ್ಪೆಂಡ್ ಮಾಡಿದ ಕ್ರಮವನ್ನ ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ

ಬೆಳಗಾವಿ,ಡಿಸೆಂಬರ್,25,2024 (www.justkannada.in): ಆಕ್ಷೇಪಾರ್ಹ ಪದ ಬಳಕೆ ಪ್ರಕರಣದಲ್ಲಿ ಸಿ.ಟಿ ರವಿ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಖಾನಾಪುರ ಪೊಲೀಸ್ ಠಾಣೆಯ ಸಿಪಿಐ ಮಂಜುನಾಥ್ ನಾಯಕ್ ಅವರನ್ನು ಅಮಾನತು ಮಾಡಿರುವ ಕ್ರಮವನ್ನ ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪೊಲೀಸ್  ಠಾಣೆಯಲ್ಲಿ ಬಿಜೆಪಿಗರಿಗೆ ಸಭೆ ಮಾಡಲು ಅವಕಾಶ ಕೊಟ್ಟಿದ್ದಾರೆ. ಪೊಲೀಸ್  ಇನ್ಸ್ ಪೆಕ್ಟರ್ ಸಭೆ ಮಾಡಲು ಅವಕಾಶ ಕೊಟ್ಟದ್ದರು.  ಠಾಣೆಯಲ್ಲಿ ಬಿಜೆಪಿಯವರು ಬಂದು ಸಭೆ ಮಾಡಬಹುದಾ?   ಹೀಗಾಗಿ ಸಿಪಿಐ ವಿರುದ್ದ ಕ್ರಮ ಕೈಗೊಳ್ಳಲಾಗಿದೆ ಎಂದರು.

ಇನ್ನ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ,  ಶಾಸಕ ಮುನಿರತ್ನಗೆ  ಮೊಟ್ಟೆ ಎಸೆದಿದ್ದಾರೆ ಎಂಬುದು   ಗೊತ್ತಿದೆ. ಆದರೆ ಯಾರು ಮೊಟ್ಟೆ ಎಸೆದಿದ್ದಾರೆ  ಅಂತಾ ಗೊತ್ತಿಲ್ಲ.  ಪೊಲೀಸರು ತನಿಖೆ ಮಾಡುತ್ತಾರೆ ಎಂದರು.

Key words: CT Ravi case, CM Siddaramaiah, CPI,  suspension