Manmohan Singh: “ ಹೆದರದೆ “ಪತ್ರಿಕಾಗೋಷ್ಠಿ “ ಎದುರಿಸಿದ”  ದೇಶದ ಕಡೆ ಪ್ರಧಾನಿ..!

Manmohan Singh: Is the country last prime minister to face a "press conference" without fear.

 

ಮೈಸೂರು, ಡಿ.೨೭, ೨೦೨೪ :  ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಇದು ನಿಜವಾಗ್ಲು ನಿಜ.  ಹೌದು ಭಾರತದ ಪ್ರಧಾನಿ ಪತ್ರಕರ್ತರ ಜತೆ ಮಾಧ್ಯಮಗೋಷ್ಠಿ ನಡೆಸುತ್ತಿದ್ದರು ಅಂದ್ರೆ ನೀವ್‌ ನಂಬಲೇ ಬೇಕು. ಕಾರಣ ಒಂದು ದಶಕಗಳಿಂದ ಈಚೆಗೆ ಇಂಥ ಸಂಪ್ರದಾಯ ಜಾರಿಯಲಿಲ್ಲ. ಹಾಗಾಗಿ ನವ ಪತ್ರಕರ್ತರಿಗೆ ಪ್ರಧಾನಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದರು ಅಂದ್ರೆ ನಂಬಲು ಅಸಾಧ್ಯ, ಆದ್ದರಿಂದ ಈ ಉಪಮೇಯ.

‘ನಾನು ಮಾಧ್ಯಮಗಳಿಗೆ ಹೆದರುವ ಪ್ರಧಾನಿ ಅಲ್ಲ’. ಸುಮಾರು ಹನ್ನೊಂದು ವರ್ಷಗಳ ಹಿಂದೆ ಅಂದಿನ ಪ್ರಧಾನಿ ಮನಮೋಹನ ಸಿಂಗ್ ಅವರು 100ಕ್ಕೂ ಹೆಚ್ಚು ಪತ್ರಕರ್ತರ ಎದುರು ಕೂತು ಹೇಳಿದ ಮಾತಿದು.

2025 ನೇ ಜನವರಿ ೩ ನೇ ತಾರೀಖು  ಬಂದರೆ, ಭಾರತದ ಪ್ರಧಾನಿ  ನಡೆಸಿದ  ಆ ವಿಶೇಷ ಮಾಧ್ಯಮಗೋಷ್ಠಿ ನಡೆದು ಸರಿಯಾಗಿ ಹನ್ನೊಂದು ವರ್ಷ ತುಂಬುತ್ತದೆ. ಹೌದು, 2014ರ ಜನವರಿ 3ರಂದು ನಡೆದ ಮಾಧ್ಯಮ ಗೋಷ್ಠಿ ಮಹತ್ವದ್ದು. ಏಕೆಂದರೆ ದೇಶದ ಪ್ರಧಾನಿಯೊಬ್ಬರು ದೇಶದೊಳಗೆ ನಡೆಸಿದ ಕೊನೆಯ ಮಾಧ್ಯಮಗೋಷ್ಠಿ ಅದು.

100ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪತ್ರಕರ್ತರು ಕಿಕ್ಕಿರಿದು ಕೂತಿದ್ದ ಸಭಾಂಗಣದಲ್ಲಿ ಅವರೆಲ್ಲರಿಗೂ ಎದುರಾಗಿ ಮನಮೋಹನ ಸಿಂಗ್‌ ಕುಳಿತಿದ್ದರು. ಯಾವುದೇ ಪಟಲಾಂಗಳಾಗಲಿ ಅಥವಾ ಟೆಲಿ ಪ್ರಾಂಪಟರ್‌ ಗಳ ವ್ಯವಸ್ಥೆಗಳಾಗಲಿ ಆಗ ಇರಲಿಲ್ಲ ಎಂಬುದು ಮುಖ್ಯ.

2ಜಿ ಹಗರಣ, ಕಲ್ಲಿದ್ದಲು ಹಗರಣ, ಭ್ರಷ್ಟಾಚಾರದ ಅರೋಪ, ನಿರ್ಭಯಾ ಪ್ರಕರಣಗಳು ಜನಮಾನಸದಲ್ಲಿ ಇನ್ನೂ ಗಟ್ಟಿಯಾಗಿದ್ದ ಸಮಯ. ವಿಪಕ್ಷಗಳು, ಸಾಮಾಜಿಕ ಕಾರ್ಯಕರ್ತರು ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಡುತ್ತಿದ್ದರು. ಈ ಎಲ್ಲಕ್ಕೂ ಸಂಬಂಧಿಸಿದ ಪ್ರಶ್ನಾಬಾಣಗಳನ್ನು ಬತ್ತಳಿಕೆಯಲ್ಲಿ ಇರಿಸಿಕೊಂಡು ಬಂದಿದ್ದ ಪತ್ರಕರ್ತರು ಒಂದುಕಡೆ, ಏಕಾಂಗಿಯಾಗಿ ಕುಳಿತಿದ್ದ ಪ್ರಧಾನಿ ಮತ್ತೊಂದು ಕಡೆ. ಆಗಲೇ ಪ್ರಧಾನಿ  ಮನಮೋಹನ ಸಿಂಗ್ ಅವರು ಹೇಳಿದ್ದು, ‘ನಾನು ಮಾಧ್ಯಮಗಳಿಗೆ ಹೆದರುವ ಪ್ರಧಾನಿ ಅಲ್ಲ’ ಎಂದು.

ಮನಮೋಹನ್‌ ಸಿಂಗ್‌ ಅವರು ದೇಶದ ಪ್ರಧಾನಿಯಾದ ನಂತರ ಎದುರಿಸಿದ 117ನೇ ಮತ್ತು ಕೊನೆಯ ಮಾಧ್ಯಮಗೋಷ್ಠಿ ಅದು. ಅನಂತರ ದೇಶದ ಪ್ರಧಾನಿ ಒಂದೂ ಮಾಧ್ಯಮಗೋಷ್ಠಿ ನಡೆಸಲೇ ಇಲ್ಲಾ.

“ಮ್ಯೂಟ್‌ ಪಿಎಂ”  ಎಂದು ಕಿಂಡಾಲ್‌ ಮಾಡಿದ್ದರು:

ಮನಮೋಹನ ಸಿಂಗ್ ಅವರನ್ನು ‘ಸೋನಿಯಾ ಅವರ ಕೈಗೊಂಬೆ’, ‘ಮೌನಿ ಸಿಂಗ್’, ‘ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಎಂದು ಜರೆಯಲಾಗುತ್ತಿತ್ತು. ಇದು ಈಗಲೂ ಸೋಷಿಯಲ್‌ ಮೀಡಿಯಾಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುತ್ತದೆ.

ಅಂದು ನಡೆದ ಮಾಧ್ಯಮಗೋಷ್ಠಿ ಈ ಜರೆಯುವಿಕೆಗಿಂತ ಭಿನ್ನವಾಗೇನೂ ಇರಲಿಲ್ಲ. ಅಲ್ಲಿ ಮನಮೋಹನ ಸಿಂಗ್ ಅವರಿಗೆ ಒಟ್ಟು 62 ಪ್ರಶ್ನೆಗಳನ್ನು ಕೇಳಲಾಗಿತ್ತು. ಆದರೆ ಅವ್ಯಾವುವೂ ‘ಸ್ಕ್ರಿಪ್ಟೆಡ್‌ “ ಪ್ರಶ್ನೆಗಳಾಗಿರಲಿಲ್ಲ. ಪ್ರತಿ ಪ್ರಶ್ನೆಯೂ ಅವರತ್ತ ಎಸೆದ ಮೊನಚಿನ ಬಾಣಗಳಾಗಿದ್ದವು. ಅವರ ಅಧಿಕಾರದ ಸತ್ಯಾಸತ್ಯತೆಯನ್ನು ಪ್ರಶ್ನಿಸಿದವು. ವಿವಿಧ ಹಗರಣ ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿದವು.

ಆ 62 ಪ್ರಶ್ನೆಗಳಿಗೂ ತಮ್ಮ ಎಂದಿನ ತಣ್ಣನೆಯ ಶೈಲಿಯಲ್ಲೇ ಉತ್ತರಿಸಿದ್ದರು. ಒಂದು ಗಂಟೆ, 15 ನಿಮಿಷ ನಡೆದಿದ್ದ ಮಾಧ್ಯಮಗೋಷ್ಠಿಯ ವಿಡಿಯೊ ಈಗಲೂ ಯೂಟ್ಯೂಬ್‌ ನಲ್ಲಿದೆ.

KEY WORDS: Manmohan Singh, last prime minister, press conference

SUMMARY: 

Manmohan Singh: Is the country last prime minister to face a “press conference” without fear.