ಮನಮೋಹನ್ ಸಿಂಗ್ ಬದುಕು, ಆಡಳಿತ ಪ್ರಜಾಪ್ರಭುತ್ವಕ್ಕೆ ಮಾದರಿ- ಶಾಸಕ ಜಿ.ಟಿ ದೇವೇಗೌಡ

ಮೈಸೂರು,ಡಿಸೆಂಬರ್,27,2024 (www.justkannada.in):  ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನಕ್ಕೆ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಸಂತಾಪ ಸೂಚಿಸಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕ ಜಿ.ಟಿ ದೇವೇಗೌಡ, ಮನಮೋಹನ್ ಸಿಂಗ್ ಅವರ ನಿಧನ ವಿಚಾರ ಕೇಳಿ ದುಃಖವಾಗಿದೆ. ಸಿಂಗ್ ಅವರ ನಿಧನ ದೇಶಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ ಆರ್ಥಿಕ ತಜ್ಞರಾಗಿ ಜಾಗತಿಕ ಮಟ್ಟದಲ್ಲಿ ದೇಶಕ್ಕೆ ಹೆಸರು ತಂದುಕೊಟ್ಟರು.  ದೇಶದ ಸರ್ವೋತೋಮುಖ ಅಭಿವೃದ್ದಿಗೆ ಕಾರಣರಾದರು.

ಪ್ರಧಾನಿ ಆಗಿ ಆರ್ಥಿಕ ತಜ್ಞರಾಗಿ ಉತ್ತಮ ಕೆಲಸ ಮಾಡಿದರು.  ಅವರ ಬದುಕು ಆಡಳಿತ ಪ್ರಜಾಪ್ರಬುತ್ವ ಸರಕಾರಕ್ಕೆ  ಮಾದರಿ. ಮನಮೋಹನ್ ಸಿಂಗ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಜಿ.ಟಿ ದೇವೇಗೌಡ ಸಂತಾಪ ಸೂಚಿಸಿದರು.

Key words: Manmohan Singh,  life, administration, model, MLA, GT Deve Gowda