ಡಿಕೆ ಶಿವಕುಮಾರ್ ಸಹನೆಯ ಕಟ್ಟೆ ಯಾವಾಗ ಒಡೆಯುತ್ತೆ ನೋಡಬೇಕು- ಸಂಸದ ಬೊಮ್ಮಾಯಿ

ಬೆಂಗಳೂರು,ಜನವರಿ,8,2025 (www.justkannada.in): ಕಾಂಗ್ರೆಸ್ ನಲ್ಲಿ ಡಿನ್ನರ್ ಮೀಟಿಂಗ್ ಪಾಲಿಟಿಕ್ಸ್ ಕುರಿತು ವ್ಯಂಗ್ಯವಾಡಿರುವ ಬಿಜೆಪಿ ಸಂಸದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು,   ಡಿಸಿಎಂ ಡಿಕೆ ಶಿವಕುಮಾರ್ ಸಹನೆಯ ಕಟ್ಟೆ ಯಾವಾಗ ಒಡೆಯುತ್ತೆ ನೋಡಬೇಕಿದೆ ಎಂದು ಲೇವಡಿ ಮಾಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ನಲ್ಲಿನ ಡಿನ್ನರ್ ಮೀಟಿಂಗ್ ನಿರೀಕ್ಷಿತ. ಕಾಂಗ್ರೆಸ್ ನಾಯಕರು ಡಿಸಿಎಂ ಡಿ.ಕೆ.ಶಿವಕುಮಾರ್ ವ್ಯಕ್ತಿತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಸಹನೆ ಎನ್ನಬೇಕೋ ಅಥವಾ ಅವರ ಮುತ್ಸದ್ದಿತನ, ಹೈಕಮಾಂಡ್ ಸೂಚನೆ ಎನ್ನಬೇಕೋ ಗೊತ್ತಿಲ್ಲ ಕಾಂಗ್ರೆಸ್ ನಾಯಕರ ಸಭೆ ನಡೆಸುತ್ತಿರುವುದನ್ನ ನೋಡಿದರೇ  ಡಿ.ಕೆ.ಶಿವಕುಮಾರ್ ಸಹನೆಯ ಕಟ್ಟೆ ಯಾವಾಗ ಒಡೆಯಲಿದೆ ನೋಡಬೇಕು ಎಂದು ಟಾಂಗ್  ಕೊಟ್ಟರು.

ಡಿಸಿಎಂ ಡಿಕೆ ಶಿವಕುಮಾರ್ ವಿದೇಶ ಪ್ರವಾಸಕ್ಕೆ ತೆರಳಿದ್ದ ವೇಳೆ  ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಡಿನ್ನರ್ ಮೀಟಿಂಗ್ ಆಯೋಜಿಸಲಾಗಿತ್ತು. ಇದಾದ ಬೆನ್ನಲ್ಲೆ ಇಂದು ಡಿನ್ನರ್ ಮೀಟಿಂಗ್ ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮುಂದಾಗಿದ್ದರು. ಆದರೆ ಹೈಕಮಾಂಡ್ ಸೂಚನೆ ಮೇರೆಗೆ ಇಂದಿನ ಡಿನ್ನರ್ ಸಭೆಯನ್ನ ಮುಂದೂಡಿಕೆ ಮಾಡಿದ್ದಾರೆ.

Key words: Dinner Meeting, DK Shivakumar, patience, MP, Basavaraj Bommai