ಬೆಂಗಳೂರು ,ಜನವರಿ,8,2025 (www.justkannada.in): ಹೆಚ್ ಎಂಪಿವಿ ವೈರಸ್ ಟೆಸ್ಟ್ ಮಾಡಿಸಿಕೊಂಡು ದುಂದು ವೆಚ್ಚ ಮಾಡಬೇಡಿ ಎಂದು ಜನರಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಲಹೆ ನೀಡಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಹೆಚ್ ಎಂಪಿವಿ ಬಗ್ಗೆ ಯಾರೂ ಕೂಡ ಆತಂಕ ಪಡುವ ಅವಶ್ಯಕತೆ ಇಲ್ಲ. ಹೆಚ್ ಎಂಪಿವಿ ಟೆಸ್ಟ್ ಮಾಡಿಸಿ ದುಂದು ವೆಚ್ಚ ಮಾಡುವ ಅಗತ್ಯವಿಲ್ಲ.
ಈ ವೈರಸ್ ನಿಂದ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ. ಅಲ್ಲದೆ ಜನರು ಅನಗತ್ಯವಾಗಿ ತಪಾಸಣೆ ಮಾಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಯಾವುದೇ ರೀತಿಯಾಗಿ ಜನರು ಭಯಪಡಬಾರದು ಎಂದರು.
Key words: HMPV test, Minister, Dinesh Gundu Rao, advises