ಮೈಸೂರು,ಜನವರಿ,8,2025 (www.justkannada.in): ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಪ್ರತಿನಿತ್ಯ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು, ಭಕ್ತರ ಭೇಟಿ ನೀಡುತ್ತಾರೆ. ಹೀಗಾಗಿ ವಾಹನ ದಟ್ಟಣೆ, ಪಾರ್ಕಿಂಗ್ ಸಮಸ್ಯೆ, ಭಕ್ತರ ಒತ್ತಡ ತಪ್ಪಿಸುವ ಸಲುವಾಗಿ ಅಲ್ಲಿ ಸಾರ್ವಜನಿಕ ವಾಹನಗಳ ನಿರ್ಬಂಧಕ್ಕೆ ಜಿಲ್ಲಾಡಳಿತ ಹಾಗೂ ಪ್ರಾಧಿಕಾರ ಮುಂದಾಗಿದೆ.
ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಮಾದರಿಯ ವಾಹನಗಳ ನಿರ್ಬಂಧ ವಿಧಿಸಿ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಪಾರ್ಕಿಂಗ್ ಸ್ಥಳ ನಿಗದಿ ಮಾಡಿ ಪಾರ್ಕಿಂಗ್ ಸ್ಥಳದಿಂದಲೇ ಭಕ್ತರು, ಸಾರ್ವಜನಿಕರನ್ನ ವಾಹನಗಳ ಮೂಲಕ ಕರೆ ತರಲು ಜಿಲ್ಲಾಡಳಿತ ಹಾಗೂ ಪ್ರಾಧಿಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಸಂಬಂಧ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಚಾಮುಂಡಿ ಬೆಟ್ಟದ ಮೇಲೆ ನೂರಾರು ವಾಹನಗಳ ಪಾರ್ಕಿಂಗ್ ಹಿನ್ನೆಲೆ. ಚಾಮುಂಡಿ ಬೆಟ್ಟಕ್ಕೆ ಒತ್ತಡ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ಚಾಮುಂಡಿ ಬೆಟ್ಟ ಸಂರಕ್ಷಣೆಗೆ ಪ್ರಾಧಿಕಾರ ಮತ್ತು ಜಿಲ್ಲಾಡಳಿತ ಮುಂದಾಗಿದೆ. ಇನ್ನು ಜಿಲ್ಲಾಡಳಿತ ಪ್ರಾಧಿಕಾರ ನಿರ್ಧಾರಕ್ಕೆ ಕೆಲ ಭಕ್ತರು ಸ್ವಾಗತ ಮಾಡಿದರೆ, ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.
Key words: restrict, public vehicles, Chamundi Hills