ಸಿಎಂ, ಡಿಸಿಎಂ ಮತ್ತು ಗೃಹಸಚಿವರ ಮುಂದೆ ಶರಣಾದ 6 ನಕ್ಸಲರು

ಬೆಂಗಳೂರು,ಜನವರಿ,8,2025 (www.justkannada.in):  ನಕ್ಸಲ್ ಮುಕ್ತ ರಾಜ್ಯ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ  ದಿಟ್ಟ ಹೆಜ್ಜೆ ಇಟ್ಟಿದ್ದು, ಈ ನಡುವೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದುರು ಇಂದು 6 ನಕ್ಸಲರು ಶರಣಾಗಿದ್ದಾರೆ.

ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್,  ಗೃಹ ಸಚಿವರಾದ ಡಾ. ಜಿ ಪರಮೇಶ್ವರ್‌ ಅವರ ಸಮ್ಮುಖದಲ್ಲಿ ಮೋಸ್ಟ್ ವಾಂಟೆಂಡ್ ಆರು ನಕ್ಸಲರು ಶರಣಾಗಿದ್ದಾರೆ. ಬಾಳೆಹೊಳೆ ಕಳಸದ ವನಜಾಕ್ಷಿ, ಮುಂಡಗಾರು ಲತಾ, ದಕ್ಷಿಣ ಕನ್ನಡದ ಕುಂತಲೂರಿನ ಸುಂದರಿ,  ಮಾರೆಪ್ಪ,  ವಸಂತ. ಟಿ ಹಾಗೂ ಎನ್.ಜೀಶಾ ಇಂದು ಸರ್ಕಾರದ ಮುಂದೆ ಶರಣಾದ ನಕ್ಸಲರು.

ಇಂದು ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಮೋಸ್ಟ್ ವಾಂಟೆಂಡ್ 6 ನಕ್ಸಲರು ಶರಣಾಗತಿಗೆ ನಿರ್ಧರಿಸಿದ್ದರು. ಆದರೇ ದಿಢೀರ್ ಬದಲಾವಣೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಮ್ಮುಖದಲ್ಲೇ ಶರಣಾಗುವ ನಿರ್ಧಾರವನ್ನು ಪ್ರಕಟಿಸಿದ್ದರು.

Key words: 6 Naxalites, surrender, CM, DCM, Home Minister