ಎಸೆನ್ಸ್ ಸೇವನೆಯಿಂದಲೇ ಮೂವರು ಕೈದಿಗಳು ಸಾವು ಎಂದು ಸ್ಪಷ್ಟಪಡಿಸಲು ಸಾಧ್ಯವಿಲ್ಲ- ವೈದ್ಯ ದಿನೇಶ್

ಮೈಸೂರು,ಜನವರಿ,8,2025 (www.justkannada.in): ಮೈಸೂರು ಕೇಂದ್ರ ಕಾರಾಗೃಹದಲ್ಲಿ ಮೂವರು ಕೈದಿಗಳ ಸಾವನ್ನಪ್ಪಿರುವ ಪ್ರಕರಣ ಸಂಬಂಧ, ಮೂವರು ಕೈದಿಗಳು ಎಸೆನ್ಸ್ ಸೇವನೆಯಿಂದಲೇ ಮೃತ ಪಟ್ಟಿದ್ದಾರೆ ಎಂಬುದನ್ನ ಸ್ಪಷ್ ಪಡಿಸಲು ಸಾಧ್ಯವಿಲ್ಲ ಎಂದು ಕೆ.ಆರ್ ಆಸ್ಪತ್ರೆಯ ವೈದ್ಯ ದಿನೇಶ್ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ವೈದ್ಯ ದಿನೇಶ್,  ಮೂವರು ಕೈದಿಗಳು ಜೈಲಿನಲ್ಲಿ ಬೇಕರಿ ಪದಾರ್ಥಗಳನ್ನ ತಯಾರು ಮಾಡುತ್ತಿದ್ದರು. ವಾಂತಿ ಭೇದಿ ಎಂದು ಕೆ.ಆರ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಮೂವರು ಕೂಡ ಆಸ್ಪತ್ರೆಗೆ ನಡೆದುಕೊಂಡು ಬಂದರು. ಆರಂಭದಲ್ಲಿ ಎಸೆನ್ಸ್ ಸೇವನೆಯ ಬಗ್ಗೆ ಕೈದಿಗಳು ಮಾಹಿತಿ ನೀಡಲಿಲ್ಲ. ಫುಡ್ ಪಾಯಿಸನ್ ವಿಚಾರಕ್ಕೆ ಚಿಕಿತ್ಸೆ ಕೊಡುತ್ತಿದ್ದೇವು. ಒಂದೇ ದಿನದಲ್ಲಿ ಅಂಗಾಂಗ ವೈಫಲ್ಯ ಆಗಲು ಶುರು ಆಯಿತು. ನಂತರ ವಿಚಾರಣೆ ಮಾಡಿದಾಗ ರಮೇಶ್ ಎಸೆನ್ಸ್ ಸೇವನೆಯ ಬಗ್ಗೆ ಮಾಹಿತಿ ನೀಡಿದರು. ಆದರೆ ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಿದ್ದಾರೆ ಎಂಬುದನ್ನ ತಿಳಿಯಲು ಸಾಧ್ಯವಾಗಲಿಲ್ಲ. ಏಕಂದರೆ ಮೂವರು ಕೂಡ ಐಸಿಯುನಲ್ಲಿ ಚಿಕಿತ್ಸೆ ಪಡೆಯುಲು ಆರಂಭಿಸಿದರು. ಕಿವಿ ಕೇಳಿಸುತ್ತಿರಲಿಲ್ಲ. ನಂತರ ಪ್ರತಿನಿತ್ಯ ಕಿಮೋ ಡಯಾಲಿಸಿಸ್ ಮಾಡಲು ಶುರು ಮಾಡಿದವು ಎಂದು ತಿಳಿಸಿದರು.

ಹಾಗೆಯೇ ಮೂವರು ಮಾದಕ ವಸ್ತುಗಳ ಸೇವೆನೆ ಮಾಡಿದ್ದಾರಾ ಎಂಬ ಬಗ್ಗೆ ಪರೀಕ್ಷೆ ಮಾಡಲಾಗಿದೆ. ಮಾದಕ ವಸ್ತು ಸೇವನೆ ಮಾಡದಿರುವುದು ವರದಿಯಿಂದ ದೃಡ ಪಟ್ಟಿದೆ. ಸ್ಯಾಂಪಲ್ ಗಳನ್ನ ಎಫ್ ಎಸ್ ಎಲ್ ಗೆ ಕಳುಹಿಸಲಾಗಿದೆ. ವರದಿ ಬಂದ ನಂತರವಷ್ಟೇ ಮೂವರ ಸಾವಿಗೆ ನಿಖರ ಕಾರಣ ತಿಳಿಯಲಿದೆ. ವೆಲ್ಲೂರು ಆಸ್ಪತ್ರೆ ಹಾಗೂ ಬೆಂಗಳೂರು ವೈದ್ಯರ ಜೊತೆ ಚರ್ಚೆ ನಡೆಸಿದ್ದೇವೆ ಎಂದು ವೈದ್ಯ ದಿನೇಶ್ ಸ್ಪಷ್ಟನೆ ನೀಡಿದರು.

Key words: mysore, three prisoners,  died, Doctor Dinesh