ಇನ್ನೂ ಸೆರೆಯಾಗದ ಚಿರತೆ: ಇನ್ಫೋಸಿಸ್  ಟ್ರೈನಿ ಉದ್ಯೋಗಿಗಳಿಗೆ ರಜೆ ಘೋಷಣೆ

ಮೈಸೂರು,ಜನವರಿ,10,2025 (www.justkannada.in):  ಇತ್ತೀಚೆಗಷ್ಟೆ ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ಇನ್ನೂ ಸೆರೆ ಸಿಕ್ಕದ ಕಾರಣ  ಟ್ರೈನಿ ಉದ್ಯೋಗಿಗಳಿಗೆ  ರಜೆ ಘೋಷಣೆ ಮಾಡಲಾಗಿದೆ.

ಇನ್ಫೋಸಿಸ್ ಆವರಣದಲ್ಲಿ ಕಳೆದ ವಾರ ಚಿರತೆ ಕಾಣಿಸಿಕೊಂಡು ಆತಂಕ ಸೃಷ್ಠಿಸಿತ್ತು. ಇದೀಗ ಪದೇ ಪದೇ ಚಿರತೆ  ಕ್ಯಾಮರಾ ಕಣ್ಣಿಗೆ ಸೆರೆಯಾಗುತ್ತಿದೆ. ಆದರೆ ಬೋನಿಗೆ ಬೀಳುತ್ತಿಲ್ಲ. ಹೀಗಾಗಿ ಒಂದು ವಾರದಿಂದಲೂ ಚಿರತೆಯ ಸೆರೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿಗಳು ಹರಸಾಹಸಪಡುತ್ತಿದ್ದಾರೆ.

ಚಿರತೆ ಸೆರೆಗೆ ಕಾರ್ಯಚರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಉದ್ಯೋಗಿಗಳಿಗೆ ಜನವರಿ 26ರವರೆಗೆ ರಜೆ ಘೋಷಣೆ ಮಾಡಲಾಗಿದೆ. ಸದ್ಯ ಇನ್ಫೋಸಿಸ್ ಆವರಣದಲ್ಲಿ ಅರಣ್ಯ ಸಿಬ್ಬಂದಿ ಬೀಡುಬಿಟ್ಟಿದ್ದು ಕಾರ್ಯಾಚರಣೆ ಮುಂದುವರೆಸಿದ್ದಾರೆ.

Key words: Leopard, Infosys,  announces, leave , trainee employees