MYSORE: “ ಆರೋಗ್ಯ ಮಾರ್ಗ” ವಿವಾದಕ್ಕೆ ತೆರೆ ಎಳೆದ ಸಿಎಂ ಸಿದ್ದರಾಮಯ್ಯ..!

MYSORE: Chief Minister Siddaramaiah has put an end to the 'health path' controversy. K.R.S Ontikoppal, If the road already has a name, don't want my name. The Chief Minister clarified that the road in Mysuru will be named as "Siddaramaiah Arogya Marga".

 

ಮೈಸೂರು, ಜ.೧೦,೨೦೨೫ : (www.justkannada.in news) ಇಲ್ಲಿನ ಒಂಟಿಕೊಪ್ಪಲು ಕೆ.ಆರ್. ಎಸ್.‌ ರಸ್ತೆಗೆ ಈಗಾಗಲೇ ಹೆಸರಿದ್ದರೆ ನನ್ನ ಹೆಸರು ಬೇಡ. ಮೈಸೂರಿನ ರಸ್ತೆಗೆ “ ಸಿದ್ದರಾಮಯ್ಯ‌ ಆರೋಗ್ಯ ಮಾರ್ಗ “ ಎಂಬ ಹೆಸರಿಡುವ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ ಮುಖ್ಯಮಂತ್ರಿ.

ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಇಂದು ಮೈಸೂರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜತೆ ಮಾತನಾಡಿದರು.

ರಸ್ತೆಗೆ ನನ್ನ ಹೆಸರಿಡುವ ವಿಚಾರ ನನಗೆ ಈವರಗೆ ಗೊತ್ತಿಲ್ಲ. ನನಗೆ ಈ ಹಿಂದೆ ಡಾಕ್ಟರೇಟ್ ಕೊಡ್ತೀನಿ ಅಂತ ಅಂದ್ರು. ನಾನು ಡಾಕ್ಟರೇಟ್ ಪದವಿಗೆ ಅರ್ಹನಲ್ಲ. ನನಗೆ ಡಾಕ್ಟರೇಟ್ ಬೇಡ ಎಂದು ನಯವಾಗಿಯೇ ಆಹ್ವಾನವನ್ನು  ತಿರಸ್ಕರಿಸಿದ್ದೆ. ಅಂತಹುದರಲ್ಲಿ ರಸ್ತೆಗೆ ಹೆಸರಿಡುವ ವಿಚಾರದ ಬಗ್ಗೆ ಆಕ್ಷೇಪವಿಲ್ಲ. ಆ ರಸ್ತೆಗೆ ಈಗಾಗಲೇ ಹೆಸರಿದ್ದರೆ ನನ್ನ ಹೆಸರು ಬೇಡ. ಈ ಎಲ್ಲಿದೆ..?  ಏನಾಗಿದೆ? ಯಾರು? ಎಂಬ ವಿಚಾರವೇ ನನಗೆ ಗೊತ್ತಿಲ್ಲ ಎಂದು ಹೇಳುವ ಮೂಲಕ ಕಳೆದ ಕೆಲ ದಿನಗಳಿಂದ ಉಂಟಾಗಿದ್ದ ಎಲ್ಲಾ ಗೊಂದಲ, ವಿವಾದಗಳಿಗೆ ತೆರೆ ಎಳೆದರು.

key words:  MYSORE, Chief Minister, Siddaramaiah, ‘health path’, Road name, controversy.

SUMMARY:

MYSORE: Chief Minister Siddaramaiah has put an end to the ‘health path’ controversy.

K.R.S Ontikoppal, If the road already has a name, don’t want my name. The Chief Minister clarified that the road in Mysuru will be named as “Siddaramaiah Arogya Marga”.