ಬಿ. ಮಂಜುನಾಥ ಅವರಿಗೆ ಮೈಸೂರು ವಿವಿಯಿಂದ ಪಿಎಚ್.ಡಿ ಪದವಿ

ಮೈಸೂರು,ಜನವರಿ,11,2025 (www.justkannada.in): ಮೈಸೂರಿನ ಎನ್.ಆರ್. ಮೋಹಲ್ಲಾ ನಿವಾಸಿ ಬೈರಪ್ಪ. ಎಸ್ ಅವರ ಪುತ್ರ ಬಿ. ಮಂಜುನಾಥ ಅವರಿಗೆ ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಲಭಿಸಿದೆ.

“A Conceptual Framework for a Courseware of Foreign Language Teaching/Learning, Evaluation and Monitoring System in the Indian Context, ಎಂಬ ಶೀರ್ಷಿಕೆಯ ಅವರ ಪ್ರಬಂಧವನ್ನು ಡಾ. ಟಿ.ಕೆ. ಗಜಾನನ್ ಅವರ ಮಾರ್ಗದರ್ಶನದಲ್ಲಿ ಪೂರ್ಣಗೊಳಿಸಿದರು.

ಮಂಜುನಾಥ ಬಿ. ಅವರು ಪ್ರಸ್ತುತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ರಿಜಿಯನಲ್ ಸೆಂಟರ್, ಮೈಸೂರು, ಸೆಂಟರ್ ಫಾರ್ ಡಿಸ್ಟನ್ಸ್ ಅಂಡ್ ಆನ್ಲೈನ್ ಎಜುಕೇಶನ್ ನಲ್ಲಿ ಪ್ರೊಗ್ರಾಮರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಣ ಮತ್ತು ಭಾಷಾ ಅಧ್ಯಯನ ಕ್ಷೇತ್ರದ ಪ್ರಗತಿಗೆ ಅವರು ಸಮರ್ಪಿತವಾಗಿ ಕೊಡುಗೆ ನೀಡಿರುವುದು ಮೆಚ್ಚುಗೆಗೆ ಅರ್ಹವಾಗಿದೆ.

ಅವರ ಸಂಶೋಧನಾ ಕೊಡುಗೆ ಮೈಸೂರಿನ ಗೌರವವನ್ನು ಮತ್ತಷ್ಟು ಹೆಚ್ಚಿಸುತ್ತದೆ ಮತ್ತು ಭವಿಷ್ಯದ ವಿದ್ಯಾರ್ಥಿಗಳನ್ನು ಶ್ರೇಷ್ಟತೆಯ ಸಾಧನೆಗೆ ಪ್ರೇರೇಪಿಸುತ್ತದೆ.

Key words: B. Manjunatha, PhD, University of Mysore.