ಮೈಸೂರು,ಜನವರಿ,11,2024 (www.justkannada.in): ಮೈಸೂರಿನ ಇನ್ಫೋಸಿಸ್ ಆವರಣದಲ್ಲಿ ಚಿರತೆ ಸೆರೆ ಕಾರ್ಯಾಚರಣೆ ಮುಂದುವರೆದಿದೆ.
ಇಂದು ಅರಣ್ಯ ಇಲಾಖೆಯ ಚಿರತೆ ಕಾರ್ಯ ಪಡೆ, ಆನೆ ಕಾರ್ಯ ಪಡೆ ಸಿಬ್ಬಂದಿ ಮತ್ತು ಮೈಸೂರು ಪ್ರಾದೇಶಿಕ ವಿಭಾಗದ ಒಟ್ಟು 70 ಸಿಬ್ಬಂದಿಗಳು ಹಾಗೂ 70 ಇನ್ಫೋಸಿಸ್ ಸಿಬ್ಬಂದಿಗಳನ್ನು ಒಳಗೊಂಡ 12 ಜಂಟಿ ತಂಡಗಳನ್ನು ರಚಿಸಿ ಸಂಪೂರ್ಣವಾಗಿ ಮ್ಯಾಸ್ಸಿವ್ ಸ್ವೀಪ್( massive Sweep) ಕೂಂಬಿಂಗ್ ಕಮ್ ಡ್ರೈವಿಂಗ್ ಆಪರೇಷನ್ (combing cum Driving operation) ಕೈಗೊಳ್ಳಲಾಗಿದೆ.
ಕಳೆದ ನಾಲ್ಕು ದಿನಗಳಿಂದ ಇಲ್ಲಿಯವರೆಗೂ ಕ್ಯಾಮೆರಾ ಟ್ರ್ಯಾಪ್ ಗಳಲ್ಲಿಯಾಗಲೀ, ಡ್ರೋನ್ ಕ್ಯಾಮೆರಾ , ಕ್ಯಾಂಪಸ್ ನಲ್ಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿಯಾಗಲಿ, ಸ್ವೀಪ್ ಕೂಂಬಿಂಗ್ (Sweep combing) ನಲ್ಲಿಯಾಗಲಿ ಯಾವುದೇ ಚಲನಾ ವಲನಗಳು, ಹೆಜ್ಜೆ ಗುರುತು ಅಥವಾ ಯಾವುದೇ ರೀತಿಯ ಚಿರತೆ ಇರುವಿಕೆಯ ಕುರುಹುಗಳಾಗಲಿ ಕಂಡು ಬಂದಿಲ್ಲ ಎಂದು ಮೈಸೂರು ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.
ಇನ್ಫೋಸಿಸ್ ಕ್ಯಾಂಪಸ್ ಗೆ ಹೊಂದಿಕೊಂಡಂತಿರುವ ಪ್ರದೇಶಗಳಲ್ಲಿಯೂ ಕಾರ್ಯಾಚರಣೆ ಮುಂದುವರಿಸಲಾಗಿದೆ. ಇಂದಿನ ಕಾರ್ಯಾಚರಣೆಯಲ್ಲಿ ಏರಿಯಲ್ ಸರ್ಚ್(Aerial search) ಗಾಗಿ ಎರಡು ಡ್ರೋನ್ ಗಳನ್ನು ಹಾಗೂ ಪಶುವೈದ್ಯಕೀಯ ತಂಡವನ್ನು ಬಳಸಲಾಗಿದೆ. ಒಂದು ಚಿರತೆ ಕಾರ್ಯಪಡೆ ತಂಡವನ್ನು ಕ್ಯಾಂಪಸ್ ನಲ್ಲಿಯೇ ನಿಯೋಜಿಸಲಾಗಿದ್ದು, ಕ್ಯಾಮೆರಾ ಟ್ರ್ಯಾಪ್ ಹಾಗೂ ಸಿಸಿಟಿವಿ ಕ್ಯಾಮೆರಾ ಮಾನಿಟರಿಂಗ್ ಮುಂದುವರಿಸಲಾಗಿದೆ. ರಾತ್ರಿ ವೇಳೆ ಮೂರು ಥರ್ಮಲ್ ಡ್ರೋನ್ ಬಳಸಿ ಏರಿಯಲ್ ಸರ್ಚ್ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾಹಿತಿ ನೀಡಿದ್ದಾರೆ.
Key words: INFOSYS campus, Continued , Operation, leopard