ಮುಡಾ ಹಗರಣ: CBI ತನಿಖೆಗೆ ಕೋರಿದ್ದ ಅರ್ಜಿ ವಿಚಾರಣೆ ಆರಂಭ

ಬೆಂಗಳೂರು, ಜನವರಿ 15,2025 (www.justkannada.in): ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದದ ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ  ವರ್ಗಾಯಿಸುವಂತೆ ಆರ್​ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ರಿಟ್​ ಅರ್ಜಿ ವಿಚಾರಣೆ  ಹೈಕೋರ್ಟ್ ನಲ್ಲಿ ಆರಂಭವಾಗಿದೆ.

ಸಿಎಂ ಸಿದ್ದರಾಮಯ್ಯ ಪರವಾಗಿ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ಮತ್ತು ಮನು ಸಿಂಘ್ವಿ, ರಾಜ್ಯ ಸರ್ಕಾರದ ಪರ‌ವಾಗಿ ಕಪಿಲ್‌ ಸಿಬಲ್, ಎಜಿ ಶಶಿಕಿರಣ್ ಶೆಟ್ಟಿ ಮತ್ತು ಹಿಂದಿನ ಭೂ ಮಾಲೀಕ ದೇವರಾಜು ಪರ ದುಷ್ಯಂತ್ ದವೆ ಅವರು ನ್ಯಾ.ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠದ ಮುಂದೆ ವಾದಿಸಲಿದ್ದಾರೆ. ಸ್ನೇಹಮಯಿ ಕೃಷ್ಣ ಪರವಾಗಿ ಮಣಿಂದರ್ ಸಿಂಗ್  ವಾದ ಮಂಡಿಸಲಿದ್ದಾರೆ.

ಲೋಕಾಯುಕ್ತ ಪೊಲೀಸರು ಸಲ್ಲಿಸಬೇಕಿದ್ದ ತನಿಖೆಯ ಅಂತಿಮ ವರದಿ ಗಡುವನ್ನು ಹೈಕೋರ್ಟ್ ಜನವರಿ 28ರವರೆಗೆ ವಿಸ್ತರಿಸಿದೆ. ಪ್ರಕರಣದ ಬಗ್ಗೆ ಇಂದು ಅಂತಿಮ ತೀರ್ಪು ಬರುವ ವಿಶ್ವಾಸವಿದೆ.

Key words: Muda scam, petition, CBI probe, High court