ವೀರ ಚಂದ್ರಹಾಸ :‌ ರವಿ ಬಸ್ರೂರ್‌ ನಿರ್ದೇಶನದ ಚಿತ್ರದಲ್ಲಿ  “ಯಕ್ಷಗಾನ” ಪಟುವಾಗಿ ಶಿವಣ್ಣ,!

Veera Chandrahasa: Shivanna to play Yakshagana exponent in Ravi Basrur's directorial debut Music director Ravi Basrur of KGF series and Salaar fame is all set for a new venture by donning the director's cap.  Ravi Basrur is making his directorial debut with the film Veera Chandrahasa.

 

ಬೆಂಗಳೂರು, ಜ.೧೬,೨೦೨೫ : ಕೆಜಿಎಫ್ ಸರಣಿ ಮತ್ತು ಸಲಾರ್ ಖ್ಯಾತಿಯ  ಸಂಗೀತ ನಿರ್ದೇಶಕ ರವಿ ಬಸ್ರೂರ್ ಇದೀಗ ನಿರ್ದೇಶಕನ ಕ್ಯಾಪ್‌ ಧರಿಸುವ ಮೂಲಕ ಹೊಸ ಸಾಹಸಕ್ಕೆ ಅಣಿಯಾಗುತ್ತಿದ್ದಾರೆ.  “ ವೀರ ಚಂದ್ರಹಾಸ” ಸಿನಿಮಾದ ಮೂಲಕ ರವಿ ಬಸ್ರೂರ್‌  ನಿರ್ದೇಶನಕ್ಕೆ ಇಳಿದಿದ್ಧಾರೆ.

ಈ ಚಿತ್ರದ ಪ್ಲಸ್‌ ಪಾಯಿಂಟ್‌ ಅಂದ್ರೆ, ಚೊಚ್ಚಲ ನಿರ್ದೇಶನದಲ್ಲೇ ಹ್ಯಾಟ್ರಿಕ್‌ ಹೀರೋ ಶಿವಣ್ಣ ನಾಯಕ ನಟನಾಗಿ ಅಭಿನಯಿಸುತ್ತಿರುವುದು. ಕನ್ನಡ ಸೂಪರ್ ಸ್ಟಾರ್ ಡಾ.ಶಿವರಾಜ್ ಕುಮಾರ್ ಅವರು ನಾಡಚಕ್ರವರ್ತಿ ಶಿವ ಪುಟ್ಟಸ್ವಾಮಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ರವಿ ಬಸ್ರೂರ್ , ಈ ಸಿನಿಮಾದ ಮೂಲಕ ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರವಾದ ಯಕ್ಷಗಾನವನ್ನು ಮುಖ್ಯವಾಹಿನಿಗೆ ತರುವ ತಮ್ಮ 12 ವರ್ಷಗಳ ಕನಸನ್ನು ನನಸಾಗಿಸಲು “ ವೀರ ಚಂದ್ರಹಾಸ “ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಸಾಂಪ್ರದಾಯಿಕ ಯಕ್ಷಗಾನ ಪ್ರದರ್ಶನಗಳು ಗಂಟೆಗಟ್ಟಲೆ ನಡೆಯಬಹುದಾದರೂ, ರವಿ ಬಸ್ರೂರ್, ಆಧುನಿಕ ಪ್ರೇಕ್ಷಕರಿಗೆ ಸೂಕ್ತವಾದ ಸಿನಿಮೀಯ ರೂಪದಲ್ಲಿ ಸಂಕ್ಷಿಪ್ತಗೊಳಿಸಿದ್ದಾರೆ.

ಸಿಂಗನಲ್ಲೂರು ಸಂಸ್ಥಾನದ ನಾದ ಚಕ್ರವರ್ತಿ ಶಿವ ಪುಟ್ಟಸ್ವಾಮಿ ಪಾತ್ರದಲ್ಲಿ ಶಿವಣ್ಣ ನಟಿಸಿದ್ದಾರೆ, ಈ ಪಾತ್ರವು ಶಿವರಾಜ್ ಕುಮಾರ್ ಅವರ ಜನ್ಮನಾಮ ನಾಗರಾಜು ಶಿವ ಪುಟ್ಟಸ್ವಾಮಿಯಿಂದ ಸ್ಫೂರ್ತಿ ಪಡೆದಿದೆ. ಪ್ರೇಕ್ಷಕರ ಕುತೂಹಲವನ್ನು ಕೆರಳಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರವಿ ಬಸ್ರೂರ್ ಹೇಳಿದ್ದಾರೆ.

ಶಿವಣ್ಣ ತಮ್ಮ ಪಾತ್ರ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಅವರು ಯಕ್ಷಗಾನ ಪ್ರದರ್ಶನಗಳ ವೀಡಿಯೊ ವೀಕ್ಷಿಸಿ ಮತ್ತು ಕಲಾ ಪ್ರಕಾರವನ್ನು ಅರ್ಥಮಾಡಿಕೊಂಡು ಬಳಿಕ ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು ಎಂಬುದಾಗಿ ರವಿ ಬಸ್ರೂರ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಚಿತ್ರದಲ್ಲಿ 450 ರಿಂದ 500 ನೈಜ ಯಕ್ಷಗಾನ ಕಲಾವಿದರು ಇದ್ದಾರೆ, ಅವರಲ್ಲಿ ಅನೇಕರು ಕಲೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ ಎಂದು ನಿರ್ದೇಶಕ ರವಿ ಬಸ್ರೂರ್ ಹೇಳಿದ್ದಾರೆ.

key words: Veera Chandrahasa, Shivanna, Yakshagana, Ravi Basrur’s, directorial debut

SUMMARY: 

Veera Chandrahasa: Shivanna to play Yakshagana exponent in Ravi Basrur’s directorial debut

Music director Ravi Basrur of KGF series and Salaar fame is all set for a new venture by donning the director’s cap.  Ravi Basrur is making his directorial debut with the film Veera Chandrahasa.