ಮೈಸೂರು, ಜ.೧೬, ೨೦೨೫ : ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಇಬ್ಬರು ಕಾರ್ಯಕರ್ತರು ಪಕ್ಷದ ಜಿಲ್ಲಾಧ್ಯಕ್ಷರಿಗೆ ದೂರು ಕೊಟ್ಟಿದ್ದು, ಇದನ್ನು ನಾವು ನಮ್ಮ ರಾಜ್ಯಾಧ್ಯಕ್ಷರಿಗೆ ಕಳಿಸಿದ್ದೇವೆ ಎಂದು ಬಿಜೆಪಿ ಮೈಸೂರು ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಎಲ್.ನಾಗೇಂದ್ರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಲ್.ನಾಗೇಂದ್ರ ಹೇಳಿದಿಷ್ಟು..ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧದ ದೂರಿಗೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳೋದು ರಾಜ್ಯ ನಾಯಕರಿಗೆ ಬಿಟ್ಟದ್ದು ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ನಮ್ಮಲ್ಲಿ ಯಾವುದೇ ಗುಂಪುಗಳಿಲ್ಲ. ಮೊನ್ನೆ ಹಸು ಕೆಚ್ಚಲು ಕೊಯ್ದ ಪ್ರಕರಣ ಖಂಡಿಸಿ ಮೈಸೂರಿನಲ್ಲಿ ಪ್ರತಿಭಟನೆ ಮಾಡಲಾಗಿತ್ತು. ರೈತ ಮೋರ್ಚಾ ಮತ್ತು ಪಕ್ಷದ ವತಿಯಿಂದಲೇ ನಡೆಸಲಾಯಿತು. ಆ ಪ್ರತಿಭಟನೆಗೂ ಮಾಜಿ ಸಂಸದ ಪ್ರತಾಪ್ ಸಿಂಹರಿಗೆ ಅಹ್ವಾನ ನೀಡಿದ್ದೆವು. ಅವರು ಯಾಕೆ ಬಂದಿಲ್ಲ ಎಂಬುದು ಗೊತ್ತಿಲ್ಲ.
ಮುಂಚೆ ಎಂಪಿ ಆಗಿದ್ದಾಗ ಬ್ಯುಸಿ ಆಗಿದ್ರು. ಈಗ ಅವರು ಹಸುವಿಗೆ ಪೂಜೆ ಮಾಡಿ ಪ್ರತಿಭಟನೆ ಮಾಡಿರಬಹುದು. ಇದು ಪಕ್ಷದ ವತಿಯಿಂದ ಮಾಡಿಲ್ಲ. ಬಿಜೆಪಿ ನಗರಾಧ್ಯಕ್ಷ ಎಲ್ ನಾಗೇಂದ್ರ ಹೇಳಿಕೆ
ಮಾಜಿ ಸಂಸದ ಪ್ರತಾಪ್ ಸಿಂಹರಿಂದ ಗೋ ಪೂಜೆ., ಬೆಂಗಳೂರಿನಲ್ಲಿ ಗೋ ಮಾತೆ ಕೆಚ್ವಲು ಕೊಯ್ದ ಪ್ರಕರಣ ಖಂಡಿಸಿ ಗೋ ಪೂಜೆ. ನಗರದ ಜಲದರ್ಶಿನಿ ಸರ್ಕಾರಿ ಅತಿಥಿ ಗೃಹದ ಬಳಿ ಗೋ ಪೂಜೆ ನೆರವೇರಿಸಿದ ಪ್ರತಾಪ್ ಸಿಂಹ. ಕೆಚ್ಚಲು ಕೊಯ್ದ ಕೀಚಕರನ್ನ ಗಲ್ಲಿಗೇರಿಸಿ ಎಂದು ಒತ್ತಾಯ. ಈ ವೇಳೆ ವಂದೇ ಮಾತರಂ ಎಂದು ಘೋಷಣೆ ಕೂಗಿದ ಬೆಂಬಲಿಗರು.
key words: Complaint, former MP Pratap Simha, L Nagendra
Complaint against former MP Pratap Simha forwarded to state president: L Nagendra