ಬೈಕ್ ಅಪಘಾತದಲ್ಲಿ ಯುವಕ ಸಾವು: ಮುಗಿಲು ಮುಟ್ಟಿದ ತಾಯಿಯ ಆಕ್ರಂದನ.

ಮೈಸೂರು,ಜನವರಿ,16,2025 (www.justkannada.in): ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತವಾಗಿ ಯುವಕ ಸಾವನ್ನಪ್ಪಿರುವ ಘಟನೆ ಮೈಸೂರಿನ ಹೂಟಗಳ್ಳಿ ಬಳಿ ನಡೆದಿದೆ.

ರಾಕಿ (30) ಸಾವನ್ನಪ್ಪಿದ ಯುವಕ. ಹೂಟಗಳ್ಳಿ ಮಾರ್ಗದಲ್ಲಿ ತೆರಳುವಾಗ ಬೈಕ್ ನಲ್ಲಿ ಬಿದ್ದು ರಾಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟ ಯುವಕನ ಶವವನ್ನ ಮೈಸೂರಿನ ಕೆ.ಆರ್.ಆಸ್ಪತ್ರೆಯ ಶವಾಗಾರ ರವಾನಿಸಲಾಗಿದ್ದು, ಶವಗಾರದ ಮುಂದೆ ರಾಕಿ ತಾಯಿಯ ಮತ್ತು ಪತ್ನಿಯ ಆಕ್ರಂದನ ಮುಗಿಲುಮುಟ್ಟಿದೆ.

ಹಿನಕಲ್ ನ ಎಸ್ ಆರ್ ಎಸ್ ನಲ್ಲಿ ರಾಕಿ ವಾಸವಿದ್ದು, ಇಂದು ಅಪಘಾತದಲ್ಲಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮಗನನ್ನ ಕಳೆದುಕೊಂಡ ಕುಟುಂಬದ ಆಕ್ರಂದನ ಹೇಳತೀರದು. ರಾಕಿ ಸಾವಿನಿಂದ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ.

Key words: Young man, dies ,bike accident, mysore