ಕಾರು ಅಪಘಾತ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ವೈದ್ಯರು

ಬೆಳಗಾವಿ,ಜನವರಿ,17,2025 (www.justkannada.in):  ಕಾರು ಅಪಘಾತದಲ್ಲಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆರೋಗ್ಯದ ಬಗ್ಗೆ ವೈದ್ಯರಾದ ಡಾ, ರವಿ ಪಾಟೀಲ್‌ ಮಾಹಿತಿ ನೀಡಿದ್ದಾರೆ.

ಲಕ್ಷ್ಮೀ ಹೆಬ್ಬಾಳಕರ್ ಗೆ ಚಿಕಿತ್ಸೆ ನೀಡುತ್ತಿರುವ ಡಾ, ರವಿ ಪಾಟೀಲ್‌ ಮಾತನಾಡಿ,   ಲಕ್ಷ್ಮೀ ಹೆಬ್ಬಾಳ್ಕರ್ ಮೇಡಂ ಅವರ ಬೆನ್ನುಮೂಳೆ ಮುರಿದಿತ್ತು. ಬಹಳಷ್ಟು ಜನ ಬಂದು ಅವರನ್ನು ನೋಡ್ತಿರೋದ್ರಿಂದ ಅವರಿಗೆ ರೆಸ್ಟ್ ಆಗುತ್ತಿಲ್ಲ. ಸದ್ಯ ಅವರು ರಿಕವರಿ ಆಗುತ್ತಿದ್ದಾರೆ. ಹೆಚ್ಚು ಜನರು ಮೇಡಂ ಅವರನ್ನು ನೋಡಲು ಬರುತ್ತಿದ್ದರಿಂದ ಅವರಿಗೆ ತೊಂದರೆ ಆಗುತ್ತಿದೆ. ನಿನ್ನೆ ಸಂಜೆಯವರೆಗೆ ಅವರಿಗೆ ತಲೆನೋವು ಹೆಚ್ಚಾಗಿತ್ತು. ಅವರಿಗೆ ಸದ್ಯ 12 ರಿಂದ 14 ಗಂಟೆ ನಿದ್ರೆಗೆ ಅವಕಾಶ ಬೇಕು. 48 ಗಂಟೆಗಳ ಕಾಲ ಅವರಿಗೆ ಯಾರೂ ‌ತೊಂದರೆ ಮಾಡಬೇಡಿ. ಅವರ ಮಗ ಮೃಣಾಲ್ ಇರುತ್ತಾರೆ ದಯವಿಟ್ಟು ಬರುವವರು ಅವರನ್ನು ಭೇಟಿಯಾಗಿ ಮಾತನಾಡಿ ಎಂದು ತಿಳಿಸಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್ ಆವರಿಗೆ ಕುತ್ತಿಗೆಯ ಭಾಗಕ್ಕೆ ಪೆಟ್ಟು ಬಿದ್ದಿದ್ದರಿಂದ ತೊಂದರೆ ಆಗುತ್ತಿದೆ. ಅಭಿಮಾನಿಗಳಿಗೆ ನಿರ್ಬಂಧ ಹಾಕಿದರೂ ಸಹ ಅವರಿಗೆ ಭೇಟಿಯಾಗುತ್ತಿದ್ದಾರೆ. ಹೆಚ್ಚಿಗೆ ಮಾತನಾಡುತ್ತಿರುವುದರಿಂದ ಲಕ್ಷ್ಮೀ ಮೇಡಂ ಅವರಿಗೆ ತೊಂದರೆ ಆಗುತ್ತಿದೆ. ಯಾರೂ ಬೇರೆ ವೈದ್ಯರು ಚಿಕಿತ್ಸೆ ನೀಡಲು ಬರುತ್ತಿಲ್ಲ. ನಾವೇ ಟ್ರೀಟ್ ಮೆಂಟ್ ಮಾಡುತ್ತಿದ್ದೇವೆ. ರಾಜಕಾರಣಿಗಳು ಆಸ್ಪತ್ರೆಗೆ ನೋಡಲು ಬರೋದು ಬೇಡ. ನಿನ್ನೆಯಿಂದ ಅವರ ತಂಗಿ ಮತ್ತು ಅವರ ತಾಯಿಯೇ ನೋಡಲು ಬಂದಿಲ್ಲ. ದಯವಿಟ್ಟು ಅವರಿಗೆ ತೊಂದರೆ ಮಾಡಬೇಡಿ ಎಂದು ಡಾ, ರವಿ ಪಾಟೀಲ್ ಮನವಿ ಮಾಡಿದರು.

ಇನ್ನು ಡ್ರೈವರ್,  ಗನ್ ಮ್ಯಾನ್ ರಿಕವರಿ ಆಗಿದ್ದಾರೆ. ಚನ್ನರಾಜ್ ಹಟ್ಟಿಹೊಳಿಯವರಿಗೆ ಹೆಡ್ ಇಂಜೂರಿ ಆಗಿತ್ತು ಎಂದು ತಿಳಿಸಿದರು.

Key words: Car accident, Minister, Lakshmi Hebbalkar, health