ಬೆಂಗಳೂರಿನಲ್ಲಿ ಬ್ರಾಹ್ಮಣ ಮಹಾ ಸಮ್ಮೇಳನ: ಮೈಸೂರಿನಿಂದ 5 ಸಾವಿರ ಮಂದಿ ಭಾಗಿ

ಮೈಸೂರು,ಜನವರಿ,17,2025 (www.justkannada.in): ಬೆಂಗಳೂರಿನ ಅರಮನೆ ಮೈದಾನದಲ್ಲಿ ಜನವರಿ 18 ಹಾಗೂ 19ರಂದು ಬ್ರಾಹ್ಮಣ ಮಹಾ ಸಮ್ಮೇಳನ ಜರುಗಲಿದ್ದು ಮೈಸೂರು ಜಿಲ್ಲೆಯಿಂದ ಸುಮಾರು 5000 ಮಂದಿ ಭಾಗವಹಿಸಲಿದ್ದಾರೆ ಎಂದು ಮಾಜಿ ನಗರ ಪಾಲಿಕೆ ಸದಸ್ಯ ಮಾ.ವಿ ರಾಮ್ ಪ್ರಸಾದ್ ಹೇಳಿದರು.

ನಗರದ ಕಾಳಿದಾಸ ರಸ್ತೆಯಲ್ಲಿರುವ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಅರ್ಚಕರು ಹಾಗೂ ಪುರೋಹಿತರಿಗೆ ಸಮಾವೇಶದ ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸಿ ಮಾತನಾಡಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ 50ವರ್ಷ ತುಂಬಿದ ಶುಭಾ ಸಂದರ್ಭದಲ್ಲಿ ಸುವರ್ಣ ಸಂಭ್ರಮ ಮತ್ತು ಮಹಾಸಮ್ಮೇಳನವನ್ನು ಜನವರಿ 18,19 ರಂದು ಅರಮನೆ ಮೈದಾನ ತ್ರಿಪುರವಾಸಿನಿ ಸಭಾಂಗಣದಲ್ಲಿ ಆಯೋಜಿಸಿದ್ದಾರೆ. ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯದವರು ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ವಿನಂತಿ, ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗೆ ಸಂಘಟಿತರಾಗಿ ಹೋರಾಟ ಮಾಡೋಣ ಎಂದು ಹೇಳಿದರು.

ಈ ವೇಳೆ ಯೋಗ ನರಸಿಂಹ (ಮುರಳಿ), ಮಾಜಿ ನಗರಪಾಲಿಕೆ ಸದಸ್ಯ ಎಂಡಿ ಪಾರ್ಥಸಾರಥಿ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಮಿರ್ಲೆ ಪನಿಷ್, ಸುಚಿಂದ್ರ, ದೇವಸ್ಥಾನದ ಪ್ರಧಾನ ಅರ್ಚಕರಾದ ವಿಜಯ ರಾಘವನ್, ರಾಘವ, ಸುಬ್ಬಣ್ಣ, ಸೂರ್ಯನಾರಾಯಣ ಭಟ್, ಕಣ್ಣನ್, ಪ್ರಸನ್ನ, ಆನಂದ್, ಹಾಗೂ ವಿಪ್ರ ಮಹಿಳಾ ಸಂಘಟಕರು ಉಪಸ್ಥಿತರಿದ್ದರು.

Key words: Brahmin Maha Sammelana, Bengaluru