‘ಹಗರಣದ ಹಣದಿಂದ ಗಾಂಧಿ ಕಾರ್ಯಕ್ರಮ’ ಎಂಬ ಆರ್.ಅಶೋಕ್ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು,ಜನವರಿ,20,2025 (www.justkannada.in): ಹಗರಣದ ಹಣದಿಂದ ಬೆಳಗಾವಿಯಲ್ಲಿ ಗಾಂಧಿ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂಬ ವಿಪಕ್ಷ ನಾಯಕ ಆರ್.ಅಶೋಕ್ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅವರು ಹೇಳೋದನ್ನೆಲ್ಲಾ ನನ್ನ ಹತ್ತಿರ ಕೇಳಬೇಡಿ. ಸರ್ಕಾರದ ಹಣ ಎಲ್ಲಿ ದುರ್ಬಳಕೆ ಆಗಿದೆ. ಬಿಜೆಪಿಯವರು ಏನೇನೋ ಹೇಳುತ್ತಾರೆ. ನೀನು ಆಗು ಅಂದ್ರೆ ಆಗುತ್ತೀಯಾ ಎಂದು ಮಾಧ್ಯಮ ಪ್ರತಿನಿಧಿಗೆ ಪ್ರಶ್ನಿಸಿದರು.

ನಾಳೆ ಬೆಳಗಾವಿಯಲ್ಲಿ ಸಮಾವೇಶ ಮಾಡುತ್ತೇವೆ.  ಸುವರ್ಣಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣ ಮಾಡುತ್ತೇವೆ.  ನಂತರ ಜೈ ಬಾಪು ಜೈ ಭೀಮ್ ಜೈಸಂವಿಧಾನ ಸಮಾವೇಶ ನಡೆಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Key words:  CM Siddaramaiah, R. Ashok,  allegation, scam money