ಮೈಸೂರಿನಲ್ಲಿ ದರೋಡೆ ಪ್ರಕರಣ: ಸಂತ್ರಸ್ತರು ಮತ್ತು ದರೋಡೆಕೋರರ ಕಾರು ಪತ್ತೆ

ಮೈಸೂರು,ಜನವರಿ,21,2025 (www.justkannada.in): ನಿನ್ನೆ ಮೈಸೂರಿನಲ್ಲಿ ನಡೆದಿದ್ದ ದರೋಡೆ ಪ್ರಕರಣ ಸಂಬಂಧ ಸಂತ್ರಸ್ತರು ಮತ್ತು ದರೋಡೆಕೋರರ ಕಾರುಗಳು ಪತ್ತೆಯಾಗಿದೆ.

ಮಾರ್ಬಳ್ಳಿ ಬಳಿ ಸಂತ್ರಸ್ತರ ಕಾರು ಪತ್ತೆಯಾದರೇ ಗೋಪಾಲಪುರ ಗ್ರಾಮದ ಬಳಿ ದರೋಡೆಕೋರಾರ ಇನ್ನೋವಾ ಕಾರು ಪತ್ತೆಯಾಗಿದೆ. ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೆ ಕೃತ್ಯ ನಡೆದ ಆರು ಕಿಲೋಮೀಟರ್ ದೂರದಲ್ಲಿ ಕಾರುಗಳು ಪತ್ತೆಯಾಗಿವೆ.  ಜಯಪುರ ಠಾಣಾ ವ್ಯಾಪ್ತಿಯ ಏಳೆಂಟು ಕಿಲೋಮೀಟರ್ ಅಂತರದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ

DL-08 CAK9775 ನಂಬರಿನ ಕಾರು ಇದಾಗಿದ್ದು ದರೋಡೆಕೋರರು ಅಸಲಿಗೆ ನಂಬರ್ ಪ್ಲೇಟ್ ಬದಲಿಸಿದ್ದಾರೆ. ದರೋಡೆಕೋರರ ಕಾರಿನ ಒಳಗೆ ಐದಕ್ಕೂ ಹೆಚ್ಚು ನಕಲಿ ನಂಬರ್ ಪ್ಲೇಟ್ ಗಳು ಪತ್ತೆಯಾಗಿದ್ದು ರೋಡ್ ರಾಬರಿಗೂ ಮುನ್ನ ಕತರ್ನಾಕ್ ಪ್ಲಾನ್ ರೂಪಿಸಿದ್ದರು ಎನ್ನಲಾಗಿದೆ. ಬೆಂಗಳೂರು ನೋಂದಣಿಯ ನಂಬರ್ ಕೂಡ ನಕಲಿ ಎಂದು ಪೊಲೀಸರು ಶಂಕಿಸಿದ್ದಾರೆ

ಈ ಸಂಬಂಧ ಮಾತನಾಡಿರುವ ದೂರುದಾರ ಮಹಮ್ಮದ್ ಅಶ್ರಫ್ , ಪ್ರಕರಣ ಸಂಬಂಧ ದರೋಡೆಗೆಂದು6 ರಿಂದ 7 ಮಂದಿಯಿದ್ದ ಆಗಂತುಕರ ತಂಡ ಮೂರು ಕಾರಿನಲ್ಲಿ ಬಂದಿದ್ದರು.  ಕೆಂಪುಬಣ್ಣದ ಸ್ವಿಫ್ಟ್ ಕಾರ್, ಇನ್ನೋವಾ ಗ್ರೇ ಕಲರ್ ಕಾರ್, ಸಿಲ್ವರ್ ಬಣ್ಣದ ಇನ್ನೋವಾದಲ್ಲಿ ಬಂದಿದ್ದರು. ಕೆಂಪುಬಣ್ಣದ ಸ್ವಿಫ್ಟ್ ಕಾರು ನಮ್ಮ ಕಾರನ್ನ ಅಡ್ಡ ಹಾಕಿದರು. ಪಕ್ಕದಲ್ಲಿ ಗ್ರೇ ಬಣ್ಣದ ಇನ್ನೋವಾ ಕಾರು ಬಂದು ನಿಂತಿತ್ತು. ಹಿಂಭಾಗದಿಂದ ಸಿಲ್ವರ್ ಕಾರ್ ನಿಂತುಕೊಂಡಿತು. ನಾವು ಹಿಂದೆ- ಮುಂದೆ, ಅಕ್ಕ- ಪಕ್ಕ ಯಾವ ಕಡೆಯೂ ಹೋಗದಂತೆ ಲಾಕ್ ಮಾಡಿದರು. ಇಬ್ಬರು ಜಾಕ್ ರಾಡ್ ನಿಂದ ನಮ್ಮ ಮೇಲೆ ಹಲ್ಲೆ ಮಾಡಿದರು. ಮತ್ತಿಬ್ಬರು ಸ್ಪ್ಯಾನರ್ ನಿಂದ ಕಿಟಕಿ ಗಾಜುಗಳನ್ನ ಹೊಡೆದು ಹಾಕಿದರು. ಒಬ್ಬ ವ್ಯಕ್ತಿ ತನ್ನ ಕೈಯಲ್ಲಿದ್ದ ಸ್ಪ್ರೇ ನಮ್ಮ ಮುಖಕ್ಕೆ ಹಾಕಿದ. ತಕ್ಷಣ ಉರಿ ತಾಳಲಾರದೆ ನಾವು ಕಣ್ಣು ಉಜ್ಜಿಕೊಳ್ಳುತ್ತಿದ್ದೆವು. ಜಾಕ್ ರಾಡ್ ನಿಂದ ನನ್ನ ಹಾಗೂ ಸೂಫಿಯ ಮೊಣಕೈಗೆ ಹೊಡೆದರು. ತಕ್ಷಣ ಬ್ಯಾಗಿನಲ್ಲಿದ್ದ ಒಂದೂವರೆ ಲಕ್ಷ ಹಣ ಕಸಿದುಕೊಂಡರು. ನನ್ನ ಬಳಿಯಿದ್ದ ವಿವೋ ಮೊಬೈಲ್ ಕೂಡ ಕದ್ದುಕೊಂಡು ಹೋದರು ಎಂದು ಘಟನೆ ಬಗ್ಗೆ ಎಫ್ ಐಆರ್ ನಲ್ಲಿ ವಿವರಿಸಿದ್ದಾರೆ.

DL 08- CAK 9775 ಇನ್ನೋವಾ, KA05- ಎನ್ ಎಲ್ 6188 ಗ್ರೇ ಕಲರ್ ಕಾರ್ ನಲ್ಲಿ ಬಂದಿದ್ದ ಆಗಂತುಕರು, ನಮ್ಮ ಮೇಲೆ ಹಲ್ಲೆ ಬಳಿಕ KL 03-Y 1261 ಎಕೋ ಫೋರ್ಡ್ ಕಾರು ತೆಗೆದುಕೊಂಡು ಹೋದರು. ನಂತರ ಹಂಪಾಪುರ ಆಸ್ಪತ್ರೆಯಲ್ಲಿ ನಾವು ಚಿಕಿತ್ಸೆ ಪಡೆದವು. ಬಳಿಕ ಜಯಪುರ ಠಾಣೆಯಲ್ಲಿ ದೂರು ನೀಡಿದ್ದೇವೆ ಎಂದು  ಮಹಮ್ಮದ್ ಅಶ್ರಫ್ ಅವರಿಂದ ದೂರು ದಾಖಲಿಸಿದ್ದಾರೆ

ಚಾಕೊಲೇಟ್ ಡೀಲರ್ ಜೊತೆಗೆ ಅಡಕೆ ತೋಟ ಗುತ್ತಿಗೆ ಪಡೆದು ವ್ಯಾಪಾರ ಮಾಡುತ್ತಿದ್ದೆ ಎಂದು ದೂರಿನಲ್ಲಿ  ಮಹಮ್ಮದ್ ಅಶ್ರಫ್ ಉಲ್ಲೇಖಿಸಿದ್ದಾರೆ. ಬೆಳಗಿನ ಜಾವ ಮೂರು ಗಂಟೆಗೆ ತಮ್ಮ ಸ್ವಗ್ರಾಮದಿಂದ ವೈನಾಡಿಗೆ ಬಸ್ಸಿನಲ್ಲಿ ಬಂದೆ. ಅಲ್ಲಿಂದ ಸೂಫಿ ಜೊತೆ ಗುಂಡ್ಲುಪೇಟೆ, ನಂಜನಗೂಡು ಮಾರ್ಗದಲ್ಲಿ ಓಡಾಡಿದೆ. ಬಳಿಕ ಮಾನಂದವಾಡಿ ರಸ್ತೆ ಬಳಿ 9.15 ರ ಬಳಿ ಬರುವಾಗ ಅಟ್ಯಾಕ್ ಮಾಡಿದರು ಅಂತ ದೂರು ನೀಡಿದ್ದಾರೆ.

Key words: Robbery case, Mysore, car, found