ಸಂವಿಧಾನ, ಪ್ರಜಾಪ್ರಭುತ್ವ ಇಲ್ಲದಿದ್ದರೇ ಅರಾಜಕತೆ ಸೃಷ್ಠಿಯಾಗುತ್ತಿತ್ತು- ಮಲ್ಲಿಕಾರ್ಜುನ ಖರ್ಗೆ

ಬೆಳಗಾವಿ,ಜನವರಿ,21,2025 (www.justkannada.in):  ಸಂವಿಧಾನ ಮತ್ತು ಪ್ರಜಾಪ್ರಭುತ್ವ ಇಲ್ಲದೇ ಹೋಗಿದ್ದರೆ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿತ್ತು. ಸಂವಿಧಾನ ಅಪಾಯದಲ್ಲಿದೆ. ಹೀಗಾಗಿ ರಕ್ಷಣೆ ಮಾಡಬೇಕಾಗಿದೆ  ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಬೆಳಗಾವಿಯ ಸುವರ್ಣಸೌಧದಲ್ಲಿ ಮಹಾತ್ಮ ಗಾಂಧೀಜಿ ಅವರ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಗಾಂಧೀಜಿ ಅವರ ತ್ಯಾಗ, ಕೊಡುಗೆಗಳು ವಿಶ್ವಮಾನ್ಯವಾಗಿವೆ. ಎಲ್ಲರಿಂದ ಹೊಗಳಿಕೆಗೆ ಪಾತ್ರವಾಗಿವೆ. 1924 ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಗಾಂಧೀಜಿ ಅಧ್ಯಕ್ಷರಾಗಿದ್ದರು. ಹೀಗಾಗಿ ಬೆಳಗಾವಿ ಹೆಮ್ಮೆಯ ಸ್ಥಳವಾಗಿದೆ ಎಂದು ಹೇಳಿದರು.

ಮಹಾತ ಗಾಂಧೀಜಿ ಸ್ವಾತಂತ್ರಕ್ಕಾಗಿ ಹೋರಾಟ ನಡೆಸಿದ್ದು, ಸಮಾಜ ಸುಧಾರಣೆ ಸೇರಿದಂತೆ ಹಲವಾರು ವಿಚಾರಗಳು ಆದರ್ಶಪ್ರಾಯವಾಗಿವೆ. ಸ್ವಾತಂತ್ರ ನಂತರ ನೆಹರೂ ಅವರ ಆಡಳಿತದಲ್ಲಿ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಅಳವಡಿಸಿಕೊಳ್ಳಲಾಯಿತು. ಇಂದು ಅದಕ್ಕೆ ಅಪಾಯ ಬಂದಿದ್ದು ರಕ್ಷಣೆ ಮಾಡುವ ಹೊಣೆಗಾರಿಕೆ ಕಾಂಗ್ರೆಸ್ಸಿಗರ ಮೇಲಿದೆ. ಸಂವಿಧಾನ ರಕ್ಷಣೆ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ. ಬೆಳಗಾವಿಗಷ್ಟೇ ಅಲ್ಲ ಕರ್ನಾಟಕಕ್ಕೆ ಹೆಸರು ತರುವ ಕೆಲಸ ಮಾಡಿದ್ದೀರಿ ಸಂವಿಧಾನ ಇರದಿದ್ದರೇ ನಿಮ್ಮ ಮೇಲೆ ಅರಾಜಕತೆ ಆಗುತ್ತಿತ್ತು ಎಂದರು.

Key words:  Constitution, democracy, Mallikarjun Kharge, Belgaum