ಕೇಂದ್ರದಿಂದ ಪ್ರತಿದಿನವೂ ಸಂವಿಧಾನದ ಮೇಲೆ ದಬ್ಬಾಳಿಕೆ: ಹೋರಾಟ ಮಾಡಲು ಸಿದ್ಧರಾಗಿ-ಪ್ರಿಯಾಂಕಾ ಗಾಂಧಿ ಕರೆ

ಬೆಳಗಾವಿ,ಜನವರಿ,21,2025 (www.justkannada.in): ಕೇಂದ್ರ ಸರ್ಕಾರ ಪ್ರತಿದಿನವೂ ಸಂವಿಧಾನದ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಕೇಂದ್ರದ ವಿರುದ್ದ ಎಲ್ಲರೂ ಹೋರಾಟ ಮಾಡಲು ಸಿದ್ದರಾಗುವಂತೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಕರೆ ನೀಡಿದರು.

ಬೆಳಗಾವಿಯ  ಸಿಪಿಎಡ್ ಮೈದಾನದಲ್ಲಿ ಆಯೋಜಿಸಿದ್ದ ಗಾಂಧಿ ಭಾರತ ಸಮಾವೇಶದಲ್ಲಿ ಮಾತನಾಡಿದ ಸಂಸದೆ ಪ್ರಿಯಾಂಕಾ ಗಾಂಧಿ, ತಮ್ಮ ಅಸ್ತಿತ್ವವನ್ನ ಉಳಿಸಿಕೊಳ್ಳಲು  ಸಂವಿಧಾನದ ಮೇಲೆ ಕೇಂದ್ರ ಸರ್ಕಾರ ದಬ್ಬಾಳಿಕೆ ಮಾಡುತ್ತಿದೆ.  ರಾಹುಲ್ ಗಾಂಧಿ  ಅವರ ಹೋರಟಕ್ಕೆ ಕೇಂದ್ರ ಸರ್ಕಾರ ಹೆದರಿದೆ ಹೀಗಾಗಿ ರಾಹುಲ್ ಗಾಂಧಿ ವಿರುದ್ದ ನೂರಾರು ಕೇಸ್ ಗಳನ್ನ ಹಾಕಿಸಿದೆ. ಆದರೆ ಇಂತಹ ಬೆದರಿಕೆಗಳಿಗೆ ರಾಹುಲ್ ಗಾಂಧಿ ಸೇರಿ ನಾವು ಹೆದರಲ್ಲ ಎಂದರು.

ನಮ್ಮದು ಸತ್ಯದ ಪರ ಹೋರಾಟ ಸಂವಿಧಾನಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ದ. ಸ್ವಾತಂತ್ರಕ್ಕಾಗಿ ಪ್ರಾಣ ತ್ಯಾಗ ಮಾಡಿದ ಪೂರ್ವಜರ ರಕ್ತ ನಮ್ಮಲ್ಲಿ ಹರಿಯುತ್ತಿದೆ. ನಿಮ್ಮಂತೆ ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದಿರಲಿಲ್ಲ. ನಮಗೆ ಭಯವಿಲ್ಲ. ಬಿಜೆಪಿಗರಂತೆ  ಹೇಡಿಗಳಲ್ಲ. ಬಲಿದಾನವೇ ನಮ್ಮ ಪರಂಪರೆ  ಎಂದು ಪ್ರಿಯಾಂಕಾ ಗಾಂಧಿ ಗುಡುಗಿದರು.

Key words:  Constitution, Central government, fight, Priyanka Gandhi