ಡಿಕೆ ಶಿವಕುಮಾರ್  ಸಿಎಂ ಆಗೋದನ್ನ ಯಾರೂ ತಪ್ಪಿಸಲು ಸಾಧ್ಯವಿಲ್ಲ: ಹೆಚ್. ವಿಶ್ವನಾಥ್

ಬೆಂಗಳೂರು,ಜನವರಿ,22,2025 (www.justkannada.in): ಮುಂದಿನ ಸಿಎಂ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಪರ ಬ್ಯಾಟ್ ಬೀಸಿದ್ದಾರೆ.

ಡಿಕೆ ಶಿವಕುಮಾರ್  ಸಿಎಂ ಆಗೋದನ್ನ ಯಾರೂ ತಪ್ಪಿಸಲು ಸಾಧ್ಯವಿಲ್ಲ ಎಂದು ಎಂಎಲ್ ಸಿ ಹೆಚ್. ವಿಶ್ವನಾಥ್ ಹೇಳಿದ್ದಾರೆ. ಇಂದು ಡಿಕೆ ಶಿವಕುಮಾರ್ ಅವರನ್ನ ಭೇಟಿಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ವಿಶ್ವನಾಥ್,  ಡಿ.ಕೆ ಶಿವಕುಮಾರ್ ಸಿಎಂ ಆಗೋದನ್ನ ಯಾರು ತಪ್ಪಿಸಲು ಆಗಲ್ಲ. ಸುಮ್ಮನೆ ಇವರಿವರೇ ಐದು ವರ್ಷ  ಸಿದ್ದರಾಮಯ್ಯ ಸಿಎಂ ಎನ್ನುತ್ತಿದ್ದಾರೆ. ಇದೆಲ್ಲಾ ಬಾಲಿಶತನ, ನ್ಯೂಸ್‌ ಸೆನ್ಸ್. 136 ಸ್ಥಾನ ಬರಲು ಡಿ.ಕೆ ಶಿವಕುಮಾರ್ ಕೊಡುಗೆ ಇದೆ. ಎಲ್ಲದಕ್ಕೂ ಡಿಕೆಶಿಯರದ್ದು ಖರ್ಚಾಗಿಲ್ವ? ಎಲೆಕ್ಷನ್ ಸಂದರ್ಭದಲ್ಲೇ ಆಗಿರುವ ಮಾತುಕತೆ ಇದು. ಡಿಕೆ ಶಿವಕುಮಾರ್ ಸಿಎಂ ಆಗೋದನ್ನ ಯಾರು ತಪ್ಪಿಸಲು ಆಗಲ್ಲ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಒತ್ತಾಯ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್,  ಇದು ಅನಾವಶ್ಯಕವಾಗಿ ಸಿಎಂ ಹಬ್ಬಿಸುತ್ತಿರುವ ಗೋಜಲು. ಕಾಂಗ್ರೆಸ್ ಪಕ್ಷದ  ನೇಮ್ ಅಂಡ್ ಫೇಮ್ ಹಾಳು ಮಾಡುತ್ತಿದ್ದಾರೆ. ಇವರೇನು ಕಾಂಗ್ರೆಸ್ ಕಟ್ಟಿದವರಲ್ಲವಲ್ಲ, ಅವರಿಗೇನು ಆಗಬೇಕು? ಅವರದ್ದು ಮುಗಿಯಿತಲ್ಲ, ಇದು ಅನಾವಶ್ಯಕ ಎಂದು  ಕುಟುಕಿದರು.

Key words: DK Shivakumar, Next, CM, MLC, H. Vishwanath