ಪುತ್ರನ ಎದುರೇ ಪತ್ನಿಗೆ ಪೆಟ್ರೋಲ್ ಹಾಕಿ ಸುಟ್ಟ ಪತಿ

ಮೈಸೂರು,ಜನವರಿ,22,2025 (www.justkannada.in): ಪತಿ ಮಹಾಶಯನೊಬ್ಬ ಪತ್ನಿ ತವರು ಮನೆಗೆ ಹೋಗಿದ್ದಕ್ಕೆ ಮಗನ ಎದುರೇ ಪೆಟ್ರೋಲ್ ಹಾಕಿ ಸುಟ್ಟಿರುವ ಘಟನೆ ಮೈಸೂರು ಜಿಲ್ಲೆ ಎಚ್.ಡಿ ಕೋಟೆಯ ಹನುಮಂತ ನಗರದಲ್ಲಿ ನಡೆದಿದೆ.

ಪತ್ನಿ ಮಧುರ ಮೇಲೆ ಪತಿ ಮಲ್ಲೇಶ್ ನಾಯ್ಕ್ ಎಂಬಾತ ಪೆಟ್ರೋಲ್ ಹಾಕಿ ಸುಟ್ಟಿದ್ದಾನೆ.  ಸದ್ಯ ಮಧುರ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವಿನ ಹೋರಾಟ ನಡೆಸುತ್ತಿದ್ದು ಪುತ್ರ ತನ್ನ ತಂದೆಯ ಕರಾಳತೆಯನ್ನ ಬಿಚ್ಚಿಟ್ಟಿದ್ದಾನೆ.

ಮಲ್ಲೇಶ್ ನಾಯ್ಕ್ ಮೂಲತಃ ವಿಜಯನಗರ ಜಿಲ್ಲೆ ಕೂಡ್ಲಗಿ ತಾಲೂಕಿನ ಬಿಬಿ ತಾಂಡದವನಾಗಿದ್ದು, ಕಳೆದ 8 ವರ್ಷಗಳ ಹಿಂದೆ ಅದೇ ಗ್ರಾಮದ ಮಧುರಳನ್ನ ಮಲ್ಲೇಶ್ ನಾಯ್ಕ್ ವಿವಾಹವಾಗಿದ್ದನು.

ಸದ್ಯ ಮಲ್ಲೇಶ್ ನಾಯ್ಕ್ ಮೈಸೂರು ಜಿಲ್ಲೆ ಎಚ್.ಡಿ ಕೋಟೆಯ ಕೆಎಸ್ಆರ್ ಟಿಸಿ ಡಿಪೋದಲ್ಲಿ ಮೆಕಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಕಳೆದ ಆರೇಳು ವರ್ಷದಿಂದ ಪತ್ನಿಗೆ ವರದಕ್ಷಣೆ ಕಿರುಕುಳ ನೀಡಿ ಪತ್ನಿಯ ಬಗೆ ಅನುಮಾನದಿಂದ ನೋಡುತ್ತಿದ್ದನು ಎಂಬ ಆರೋಪ ಕೇಳಿ ಬಂದಿದೆ.

ಪ್ರತಿ ದಿನ ಕುಡಿದು ಬಂದು ಸೈಟ್ ಕೊಡಿಸುವಂತೆ ಮಲ್ಲೇಶ್ ಪತ್ನಿಯ ಜೊತೆ ಗಲಾಟೆ ಮಾಡುತ್ತಿದ್ದ. ಈ ನಡುವೆ ಕೆಲ ದಿನಗಳ ಹಿಂದೆ ಒಂದೆರೆಡು ದಿನಗಳ ಮಟ್ಟಿಗೆ ಮಧುರ ತವರು ಮನೆಗೆ ಹೋಗಿದ್ದರು.  ಈ ವಿಚಾರವನ್ನೇ ಇಟ್ಟುಕೊಂಡು ಮಲ್ಲೇಶ್ ನಾಯ್ಕ್ ಪತ್ನಿಗೆ ಪೆಟ್ರೋಲ್ ಹಾಕಿ ಸುಟ್ಟಿದ್ದಾನೆ. ಮಲ್ಲೇಶ್ ನಾಯ್ಕ್ ಹಾಗೂ ಮಲ್ಲೇಶ್ ತಾಯಿ ಗೌರಿಯು  ಪ್ರತಿನಿತ್ಯ ಮಧುರಗೆ ಕಿರುಕುಳ ನೀಡುತ್ತಿದ್ದರು ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ

ಈ ಕುರಿತು ಎಚ್.ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: mysore, Husband, petrol, wife, fire