ನಾನು ಯಾವುದೇ ಸ್ಥಾನ ಹುಡುಕಿಕೊಂಡು ಹೋಗಲ್ಲ- ಡಿಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು,ಜನವರಿ,22,2025 (www.justkannada.in): ಅಧಿಕಾರ ಹಂಚಿಕೆ ಮುಂದಿನ ಸಿಎಂ ವಿಚಾರದ ಬಗ್ಗೆ ಚರ್ಚೆ ಮುನ್ನೆಲೆಗೆ ಬರುತ್ತಲೇ ಇದ್ದು, ಡಿಸಿಎಂ ಡಿಕೆ ಶಿವಕುಮಾರ್ ಗೆ ಸಿಎಂ ಪಟ್ಟ ನೀಡುವಂತೆ ಅವರ ಅಭಿಮಾನಿಗಳು, ಅವರ ಬೆಂಬಲಿಗರು ಆಗ್ರಹಿಸುತ್ತಲೇ ಇದ್ದಾರೆ. ಬಿಜೆಪಿ ಎಂಎಲ್ ಸಿ ಹೆಚ್.ವಿಶ್ವನಾಥ್ ಸಹ ಡಿಕೆ ಶಿವಕುಮಾರ್ ಪರ ಬ್ಯಾಟ್ ಬೀಸಿದ್ದಾರೆ.

ಈ ಕುರಿತು ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ಈಗ ಅರ್ಜೆಂಟ್ ಯಾವುದು ಇಲ್ಲ. ಏನೇ ಇದ್ದರೂ ಸಹ ನಮ್ಮ ಪಕ್ಷ ತೀರ್ಮಾನಿಸುತ್ತದೆ.  ನಾನು ಯಾವುದೇ ಸ್ಥಾನ ಹುಡುಕಿಕೊಂಡು ಹೋಗಲ್ಲ ನನಗೆ ಯಾವುದೇ ಸ್ಥಾನ ಹುಡುಕಿ ಹೋಗುವ ಅಗತ್ಯವಿಲ್ಲ. ಪಕ್ಷಕ್ಕೆ ಏನು ಮಾಡಬೇಕೋ ಅದನ್ನ ಮಾಡುತ್ತೇನೆ ಮಿಕ್ಕಿದ್ದನ್ನ ಪಕ್ಷ ನೋಡಿಕೊಳ್ಳುತ್ತದೆ ಎಂದಿದ್ದಾರೆ. ಮಿಕ್ಕಿದ್ದು ಪಾರ್ಟಿ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದ್ದಾರೆ.

Key words: search, any position, DCM, D.K. Shivakumar