ಪತಿಯೇ ಸೀಮೆ‌ಎಣ್ಣೆ ಸುರಿದು ಕೊಲೆಗೆ ಯತ್ನಿಸಿದ್ದ ಕೇಸ್: ಪತ್ನಿಯ ಸ್ಥಿತಿ ಗಂಭೀರ

ಮೈಸೂರು,ಜನವರಿ,23,2025 (www.justkannada.in):  ಪತಿಯೇ ಸೀಮೆ‌ಎಣ್ಣೆ ಸುರಿದು ಕೊಲೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧ  ಪತ್ನಿ ಮಧುರ ಅವರ ಸ್ಥಿತಿ ಗಂಭೀರವಾಗಿದೆ.

ತವರು ಮನೆಗೆ ಹೋಗಿದ್ದಕ್ಕೆ ಪತಿ ಮಲ್ಲೇಶ್ ನಾಯ್ಕ್ ಪತ್ನಿ ಮಧುರಾಗೆ ಪುತ್ರನ ಎದುರಲ್ಲೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದ. ತಕ್ಷಣವೇ ಮಧುರಾ ಅವರನ್ನ ಮೈಸೂರಿನ ದಟ್ಟಗಳ್ಳಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೈಸೂರು ಜಿಲ್ಲೆ ಎಚ್‌ಡಿ‌ ಕೋಟೆ ಪಟ್ಟಣ ಹನುಮಂತನಗರದಲ್ಲಿ ಈ ಘಟನೆ ನಡೆದಿತ್ತು. ಮಧುರ ಅವರ ಸ್ಥಿತಿ ಗಂಭೀರವಾಗಿದ್ದು  ಆಸ್ಪತ್ರೆ ಬಳಿಗೆ ವಿಜಯಪುರದಿಂದ ಕುಟುಂಬಸ್ಥರು ಆಗಮಿಸಿದ್ದಾರೆ.

ಅಕ್ಕನಿಗೆ ಬೆಂಕಿಹಚ್ಚಿದ ಬಾವ ಮಲ್ಲೇಶ್ ನಾಯ್ಕ್ ಗೆ ಬಾಮೈದನಿಂದ ಮಚ್ಚಿನೇಟು:

ಸೀಮೆ ಎಣ್ಣೆ ಸುರಿದು ಅಕ್ಕನ ಕೊಲೆಗೆ ಯತ್ನಸಿದ್ದ ಭಾವ ಮಲ್ಲೇಶ್ ನಾಯ್ಕನ ಮೇಲೆ ಬಾಮೈದ ಶೇಖರ್ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಮೈಸೂರಿನ ಆಸ್ಪತ್ರೆ ಆವರಣದಲ್ಲಿ ನಡೆದಿದೆ.

ಮಧುರ ಅವರನ್ನ ಗಂಡ ಕೊಲೆ ಮಾಡಲು ಯತ್ನಿಸಿದ್ದ  ವಿಚಾರವನ್ನ ಮಧುರ ಅವರ ಮಗ ತನ್ನ ಮಾವನ ಬಳಿ ಬಾಯ್ಬಿಟ್ಟಿದ್ದ. ಈ ಸಂಬಂಧ ನಾಯ್ಕನ ವಿರುದ್ಧ ದೂರು ನೀಡಲಾಗಿತ್ತು. ದೂರಿನ ಬಳಿಕ ವಿಜಯನಗರದಿಂದ ಬಂದ ಬಾಮೈದ ಶೇಖರ್  ಬಾವ ಮಲ್ಲೇಶ್ ನಾಯ್ಕನ ಮೇಲೆ‌ ಮಚ್ಚಿನಿಂದ ಹಲ್ಲೆ ಮಾಡಿದ್ದು ಮಚ್ಚಿನೇಟು ತಿಂದು ಮಲ್ಲೇಶ್ ನಾಯ್ಕ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

 

Key words: Husband, murder wife, dies, mysore