ಮೈಸೂರಿನಲ್ಲಿ ದರೋಡೆ ಕೇಸ್: ಕಾರುಗಳ ಮಾಲೀಕರ ಪತ್ತೆ: ಓರ್ವ ಶಂಕಿತ  ವ್ಯಕ್ತಿ ಅರೆಸ್ಟ್

ಮೈಸೂರು,ಜನವರಿ,23,2025 (www.justkannada.in): ಮೈಸೂರಿನಲ್ಲಿ ಕಾರನ್ನು ಅಡ್ಡಗಡ್ಡಿ ದರೋಡೆ ಮಾಡಿದ ಪ್ರಕರಣ ಸಂಬಂಧ  ಪೊಲೀಸರು ಕಾರಿನ ನಂಬರ್ ಆಧರಿಸಿ ಮಾಲೀಕನ ಪತ್ತೆ ಕಾರ್ಯ ಮಾಡಿದ್ದು, ಎರಡೂ ಕಾರುಗಳ ಮಾಲೀಕರ ಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಕೃತ್ಯಕ್ಕೆ ದುಷ್ಕರ್ಮಿಗಳು ಬಳಸಿದ ಇನ್ನೋವಾ ಕಾರು ಮಾಲೀಕ ಪತ್ತೆಯಾಗಿದ್ದು, ಕಾರನ್ನ ಮೂವರು ದುಷ್ಕರ್ಮಿಗಳು ಬಾಡಿಗೆಗೆ ಪಡೆದುಕೊಂಡಿದ್ದರೆಂದು ಪೊಲೀಸರ ವಿಚಾರಣೆಯಿಂದ ಮಾಹಿತಿ ತಿಳಿದು ಬಂದಿದೆ.

ಕಾರಿನ ಮಾಲೀಕನನ್ನ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಸಂತ್ರಸ್ತರ ಫೋರ್ಡ್ ಸ್ಪೋರ್ಟ್ ಕಾರು ಮಾಲೀಕನ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಓರ್ವ ಶಂಕಿತ ವ್ಯಕ್ತಿ ವಶಕ್ಕೆ

ಮೈಸೂರು ರೋಡ್ ರಾಬರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಪುರ ಠಾಣಾ ಪೊಲೀಸರು ಓರ್ವ ಶಂಕಿತ ವ್ಯಕ್ತಿಯನ್ನ ವಶಕ್ಕೆ ಪಡೆದಿದ್ದಾರೆ. ಶಂಕಿತ ವ್ಯಕ್ತಿ ಮೈಸೂರಿನ ಬಡಾವಣೆಯೊಂದರ‌ ನಿವಾಸಿಯಾಗಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.

Key words: Robbery case, Mysore, Owners, cars,  identified