ತಾರಕಕ್ಕೇರಿದ ಮುನಿಸು: ಶ್ರೀರಾಮುಲು ವಿರುದ್ದ ಜನಾರ್ಧನ ರೆಡ್ಡಿ ವಾಗ್ದಾಳಿ

ಬೆಂಗಳೂರು,ಜನವರಿ,23,2025 (www.jutkannada.in): ಆಪ್ತ ಸ್ನೇಹಿತರಾಗಿದ್ದ ಮಾಜಿ ಸಚಿವ ಶ್ರೀರಾಮುಲು ಮತ್ತು ಶಾಸಕ ಜನಾರ್ಧನ ರೆಡ್ಡಿ ನಡುವೆ ಬಿರುಕು ಮೂಡಿದ್ದು, ಸಂಡೂರು ಉಪಚುನಾವಣೆಯಲ್ಲಿ ಸರಿಯಾಗಿ ಕೆಲಸ ಮಾಡಿಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅವರಿಗೆ ತನ್ನ ವಿರುದ್ದ ದೂರು ನೀಡಿದ್ದಾರೆಂದು ಆರೋಪಿಸಿ ಶಾಸಕ ಜನಾರ್ಧನ ರೆಡ್ಡಿ ವಿರುದ್ದ ಮಾಜಿ ಸಚಿವ ಶ್ರೀರಾಮುಲು ನಿನ್ನೆ ವಾಗ್ದಾಳಿ ನಡೆಸಿದ್ದರು.

ಇದೀಗ ಶಾಸಕ ಜನಾರ್ಧನ ರೆಡ್ಡಿ ಅವರು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಹಳೇ ಕೇಸ್ ಗಳನ್ನ ಕೆದುಗಿ ಶ್ರೀರಾಮುಲು ಅವರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಸಂಡೂರು ಉಪಚುನಾವಣೆ ಟಿಕೆಟ್ ಬಗ್ಗೆ ನನ್ನ ಜೊತೆ ಚರ್ಚಿಸಿದರು ಯಾರಿಗೆ ಟಿಕೆಟ್ ಕೊಟ್ಟರೂ ನಾನು ಕೆಲಸ ಮಾಡುತ್ತೇನೆ ಎಂದು ಬಿವೈ ವಿಜಯೇಂದ್ರ, ಹಾಗೂ ಹೈಕಮಾಂಡ್ ನಾಯಕರಿಗೆ ಹೇಳಿದ್ದೆ.  ಯಡಿಯೂರಪ್ಪ ಸೇರಿ ಹಲವು ನಾಯಕರು ಪ್ರಚಾರ ಮಾಡಿದ್ದರು.  ಶ್ರೀರಾಮುಲು ಕೂಡ 3 ದಿನ ತಡವಾಗಿ ಬಂದರು. ಎಲ್ಲರೂ ಬಂದು ಪ್ರಚಾರ ಮಾಡಿದರು. ಅತ್ತ ಸಿಎಂ ಸಿದ್ದರಾಮಯ್ಯ ಅಲ್ಲೇ  3 ದಿನ ಉಳಿದಿದ್ದರಿಂದ ನಮಗೆ ಸೋಲಾಯಿತು. ನಾನು  ಶ್ರೀರಾಮುಲು ವಿರುದ್ದ ಯಾವುದೇ ಚಾಡಿ ಮಾತು ಹೇಳಿಲ್ಲ  ರೆಡ್ಡಿ ರಾಮುಲು ಬಗ್ಗೆ ಬಳ್ಳಾರಿ ಜನತೆಗೆ ಗೊತ್ತಿದೆ ಎಂದರು.

ಹಳೇ ಕೇಸ್ ತೆಗೆದು ವಾಗ್ದಾಳಿ ನಡೆಸಿದ ಜನಾರ್ಧನ ರೆಡ್ಡಿ,  ಶ್ರೀರಾಮುಲು ಹಾದಿ ಬೀದಿಯಲ್ಲಿ ಓಡಾಡುತ್ತಿದ್ದರು.  ರಾಮುಲು ಮಾವ ರೈಲುಬಾಬುವಿನ ಕೊಲೆಯಾಗುತ್ತೆ. ಆ ಕೊಲೆ ನಂತರ ರಾಮುಲು  ನನ್ನ ಸುಪರ್ದಿಗೆ ಬಂದಿದ್ದರು.  ಕೈಯಲ್ಲಿ ಚಾಕು ಕೊಡಲಿ ಹಿಡಿದು ಬಂದಿದ್ದರು. ಮಾವನನ್ನ ಕೊಲೆಮಾಡಿದವರನ್ನ ಕೊಲ್ಲುವುದಾಗಿ ಹೇಳಿದ್ದರು. ಆಗ  ಶ್ರೀರಾಮುಲು ಜೊತೆಯಲ್ಲಿಟ್ಟುಕೊಂಡು ಹೋರಾಟ ಮಾಡಿದ್ದೆ. ರಾಮುಲುರನ್ನು ಸನ್ಮಾರ್ಗಕ್ಕೆ ಕರೆತಂದಿದ್ದೇ ತಪ್ಪಾ ಎಂದು

2018ರಲ್ಲಿ ಶ್ರೀರಾಮುಲು ಗೆಲ್ಲಲು ನನ್ನ ಪಾತ್ರ ಇದೆ. ಸೋಲುವ ಭೀತಿಯಿಂದ ಬಳ್ಳಾರಿ ಬಿಟ್ಟು ಮೊಳಕಾಲ್ಮೂರಿನಲ್ಲಿ ನಿಂತರು.  ನಾನು ಸಹಾಯ ಮಾಡಿದೆ ಎಂದು ಜನಾರ್ಧನರೆಡ್ಡಿ ಕಿಡಿಕಾರಿದರು.

Key words:  Former Minister, Sriramulu, MLA,  Janardhana Reddy