ಸತೀಶ್ ಮಣಿಸಲು ಶ್ರೀರಾಮುಲುಗೆ ಡಿಕೆ ಶಿವಕುಮಾರ್ ಗಾಳ- ಹೊಸಬಾಂಬ್ ಸಿಡಿಸಿದ ಜನಾರ್ಧನ ರೆಡ್ಡಿ

ಬೆಂಗಳೂರು,ಜನವರಿ,23,2025 (www.justkannada.in): ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಎಸ್‌ಟಿ ಸಮುದಾಯದ ನಾಯಕ ಸತೀಶ್ ಜಾರಕಿಹೊಳಿ ಅವರನ್ನ ಮಣಿಸಲು ಶ್ರೀರಾಮುಲು ಅವರನ್ನ ಸೆಳೆಯಲು ಡಿಕೆ ಶಿವಕುಮಾರ್ ಯತ್ನಿಸುತ್ತಿದ್ದಾರೆ ಎಂದು ಶಾಸಕ ಜನಾರ್ಧನ ರೆಡ್ಡಿ ಹೊಸ ಬಾಂಬ್ ಸಿಡಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಜನಾರ್ದನ ರೆಡ್ಡಿ, ಸತೀಶ್ ಜಾರಕಿಹೊಳಿ ಮಣಿಸಲು ಶ್ರೀರಾಮುಲು ಅವರನ್ನ ಡಿಕೆ ಶಿವಕುಮಾರ್ ಬೆಳೆಸುತ್ತಿದ್ದಾರೆ.  ರಾಮುಲುರನ್ನ ಕಾಂಗ್ರೆಸ್ ಗೆ ತರಲು ಡಿಕೆ ಶಿವಕುಮಾರ್ ಯತ್ನಿಸುತ್ತಿದ್ದಾರೆ.  ಸತೀಶ್ ಜಾರಕಿಹೊಳಿ ವಿರುದ್ದ ಎಸ್ ಟಿ ನಾಯಕನ ಎತ್ತಿಕಟ್ಟಲು ಯತ್ನಿಸುತ್ತಿದ್ದಾರೆ ಎಂದರು.

ಶ್ರೀರಾಮುಲು ಪಕ್ಷ ಬಿಟ್ಟು ಹೋಗುತ್ತಾರೆ ಎಂದರೆ ಅದು ಹೊಸದಲ್ಲ. ಈ ಹಿಂದೆ ಬಿಎಸ್ ಆರ್ ಕಾಂಗ್ರೆಸ್ ಪಕ್ಷ ಮಾಡುವಾಗಲೇ ನಾನು ಬಿಜೆಪಿ ಪಕ್ಷ ಬಿಡಬೇಡ ಅಂತ ಹೇಳಿದ್ದೆ. ಆಗ ನನ್ನ ಸಿಬಿಐ ಅರೆಸ್ಟ್ ಮಾಡ್ತಾರೆ. ಬಹಳ‌ ಕಷ್ಟ ನಮಗೆ ಇದೆ ಎಂತಲೂ ಹೇಳಿ, ಸುಮ್ಮನಿರುವಂತೆ ತಿಳಿಸಿದ್ದೆನು. ಆದರೂ ರಾಜಕೀಯ ಸಂಕಷ್ಟದ ಪರಿಸ್ಥಿತಿಯಲ್ಲಿ ನನ್ನ ಮಾತನ್ನು ಕೇಳಲಿಲ್ಲ. ಇದೀಗ ಯಾರದ್ದೋ ಮಾತು ಕೇಳಿಕೊಂಡು ಅವರು ಪಕ್ಷ ಬಿಡೋದಾದ್ರೆ ಬಿಡಲಿ. ಆದರೆ ನನ್ನ ಆರೋಪ ಮಾಡಿ ಹೋಗೋದು ಬೇಡ. ಬಳ್ಳಾರಿ ಭಾಗದಲ್ಲಿ ಅವರು ಪಕ್ಷ ಬಿಡ್ತಾರೆ ಅಂತ ಚರ್ಚೆ ಆಗ್ತಾ ಇದೆ ಎಂದು ಜನಾರ್ಧನ ರೆಡ್ಡಿ ತಿಳಿಸಿದರು.

Key words: Satish Jarakiholi, Sriramulu,  DK Shivakumar, Janardhana Reddy