ಮೈಸೂರು, ಜ.೨೪, ೨೦೨೫: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಹಗರಣದ ತನಿಖಾ ವರದಿ ಬೆನ್ನಲ್ಲೇ, ಸರ್ವ ಪಕ್ಷಗಳು ಇದರಲ್ಲಿ ಸಮಾನವಾಗಿ ಭಾಗಿಯಾಗಿರುವ ಅಂಶ ರುಜುವಾತುಗೊಂಡಿದೆ.
ಲೋಕಾಯುಕ್ತ ಅಧಿಕಾರಿಗಳು ತಲಾಶ್ ನಡೆಸಿದ ಮುಡಾದ ಮಹತ್ವದ ದಾಖಲೆಗಳ ಮಾಹಿತಿ” ಜಸ್ಟ್ ಕನ್ನಡ” ಗೆ ಲಭಿಸಿದೆ.
ಮುಡಾದಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಅಂತಿಮ ಹಂತದ ಕಾರ್ಯಾಚರಣೆ ನಡೆದಿದ್ದು, ಮಹತ್ವದ ದಾಖಲೆ ಕಲೆ ಹಾಕಿದ್ದಾರೆ. ಗುರುವಾರ ತಡರಾತ್ರಿವರೆಗೂ ದಾಖಲೆಗಳ ಶೋಧಕಾರ್ಯ ನಡೆದಿದೆ. ಸಭೆಯ ಬರೋಬ್ಬರಿ 7 ಗಂಟೆಗಳ ಆಡಿಯೋ ದಾಖಲೆ ಸಂಗ್ರಹಿಸಿರುವ ಮೈಸೂರು ಲೋಕಾಯುಕ್ತರು, ಸಭೆಯಲ್ಲಿದ್ದವರ ಆಡಿಯೋ ಮಾಹಿತಿ ಆಲಿಸಿ ವರದಿ ಸಿದ್ಧಪಡಿಸಿದೆ.
ಡಾ.ಯತೀಂದ್ರ ಸಿದ್ದರಾಮಯ್ಯ ಮಾತ್ರ ಭಾಗಿಯಾಗಿರದ ಈ ಸಭೆಯಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಈ ಮೂರು ಪಕ್ಷದ ನಾಯಕರು ಉಪಸ್ಥಿತರಿದ್ದರು ಎಂಬುದು ದಾಖಲೆಗಳ ಸಮೇತ ದೃಢಪಟ್ಟಿದೆ.
20.11.2020 ರ ಸಭೆಯ ದಾಖಲೆಗಳ ಪ್ರಕಾರ, ಸಭೆಯಲ್ಲಿ ಯಾರೆಲ್ಲ ಉಪಸ್ಥಿತಿ ಇದ್ದರೆಂಬುದು ಇದೀಗ ವರದಿಯಲ್ಲಿ ಉಲ್ಲೇಖಗೊಂಡಿದೆ.
ಸಭೆಯಲ್ಲಿ ಯಾರೆಲ್ಲ..?
೨೦೨೦ ರ ನವೆಂಬರ್ ೨೦ ರಂದು ನಡೆದ ಮುಡಾ ಸಭೆಯಲ್ಲಿ ಯಾರು ಭಾಗವಹಿಸಿದ್ದರು, ಅವರು ಏನೆಲ್ಲ ವಿಷಯಗಳನ್ನು ಪ್ರಸ್ತಾಪಿಸಿದರು ಎಂಬ ಮಾಹಿತಿ ಹಾಗೂ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದ ಮಾಹಿತಿ ವರದಿಯಲ್ಲಿದೆ. ಬಹುತೇಕ ಈ ವರದಿಯೇ ಸೋಮವಾರ ಹೈಕೋರ್ಟ್ ಗೆ ಸಲ್ಲಿಕೆಯಾಗಲಿದೆ.
ಎರಡು ವರ್ಷಗಳ ಹಿಂದೆ ನಡೆದ ಮುಡಾ ಸಭೆಯಲ್ಲಿ ಶೇ 50:50 ಅನುಪಾತದ ನಿವೇಶನಗಳ ಹಂಚಿಕೆ ವಿಚಾರ ಚರ್ಚೆ ನಡೆದಿದೆ. ಅಂದಿನ ಮುಡಾದ ಅಧ್ಯಕ್ಷ ಎಚ್.ವಿ.ರಾಜೀವ್ ನೇತೃತ್ವದಲ್ಲಿ ನಡೆದಿದ್ದ ಈ ಸಭೆಯಲ್ಲಿ ಆಯುಕ್ತ ಡಿ.ಬಿ.ನಟೇಶ್ ಹಾಜರಿದ್ದರು.
ಸಭೆಯಲ್ಲಿ ಭೂಮಿ ಕಳೆದುಕೊಂಡವರು ಒಪ್ಪುವುದಾದರೆ ಶೇ.50 ನಿವೇಶನ ನೀಡಲು ನಿರ್ಣಯ. ಅಂದಿನ ಸಭೆಯಲ್ಲಿ ಜೆಡಿಎಸ್ ನ ಶಾಸಕರಾದ ಜಿ.ಟಿ.ದೇವೇಗೌಡ, ಕೆ.ಟಿ.ಶ್ರೀಕಂಠೇಗೌಡ, ಬಿಜೆಪಿ ಶಾಸಕರಾದ ಎಲ್.ನಾಗೇಂದ್ರ, ಎಸ್.ಎ.ರಾಮದಾಸ್, ಹರ್ಷವರ್ಧನ್ ಹಾಗೂ ಕಾಂಗ್ರೆಸ್ ಶಾಸಕರಾದ ತನ್ವೀರ್ ಸೇಠ್, ಡಾ.ಯತೀಂದ್ರ ಸಿದ್ದರಾಮಯ್ಯ, ಧರ್ಮಸೇನ ಸೇರಿ ಪದನಿಮಿತ್ತ ಸದಸ್ಯರು ಉಪಸ್ಥಿತರಿದ್ದರು.
key words: MUDA, Fifty-Fifty site, JDS-BJP-congress MLAs, involved.!
SUMMARY:
MUDA Fifty-Fifty site: Not only Congress, but also JDS-BJP MLAs are involved.
It has been confirmed with the documents that the leaders of the three parties BJP, JDS and Congress were present in this meeting, in which Dr. Yathindra Siddaramaiah was not the only participant.
According to the documents of the meeting dated 20.11.2020, the presence of all those present in the meeting has now been mentioned in the report.