ಬಳ್ಳಾರಿ,ಜನವರಿ,25,2025 (www.justkannada.in): ತಮ್ಮ ವಿರುದ್ದ ಮಾಜಿ ಸಚಿವ ಶ್ರೀರಾಮುಲು ಬೆಂಬಲಿಗರು ಎಸ್ ಪಿ ಅವರಿಗೆ ದೂರು ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಶಾಸಕ ಜನಾರ್ಧನ ರೆಡ್ಡಿ, ನಾನು ಸಿಬಿಐ ಕೇಸ್ ಗಳನ್ನೇ ನೋಡಿದ್ದೇನೆ. ಯಾವ ದೂರಿಗೂ ಜಗ್ಗಲ್ಲ ಬಗ್ಗಲ್ಲ ಎಂದಿದ್ದಾರೆ.
ಈ ಕುರಿತು ಮಾತನಾಡಿದ ಶಾಸಕ ಜನಾರ್ಧನ ರೆಡ್ಡಿ, ಅನೇಕ ಸಿಬಿಐ ಪ್ರಕರಣಗಳನ್ನೇ ನೋಡಿದ್ದೇನೆ ರಾಮುಲು ಬೆಂಬಲಿಗರ ದೂರು ಯಾವ ಲೆಕ್ಕ? ಯಾವುದೇ ದೂರಿಗೆ ನಾನು ಜಗ್ಗಲ್ಲ ಬಗ್ಗಲ್ಲ ಎಂದರು.
ಆಸ್ತಿ ವಿಚಾರಕ್ಕೆ ರೆಡ್ಡಿ ರಾಮುಲು ವೈಮನಸ್ಸು ವಿಚಾರ ಕುರಿತು ಪ್ರತಿಕ್ರಿಯಿಸಿಲು ನಿರಾಕರಿಸಿದ ಜನಾರ್ಧನ ರೆಡ್ಡಿ, ಯಾವುದೇ ವಿಷಯ ಕೂಡ ರಹಸ್ಯವಾಗಿರಲ್ಲ. ವರಿಷ್ಠರ ಮುಂದೆ ಚರ್ಚೆ ಮಾಡುತ್ತೇನೆ. ನಾನು ಏನೇ ಇದ್ರೂ ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ. ವರಿಷ್ಠರು ಸೂಚನೆ ಕೊಟ್ಟಿದ್ದಾರೆ ಎಂದರು.
Key words: Sriramulu, Supporter, complaint, MLA, Janardhana Reddy