RTI ಕಾರ್ಯಕರ್ತರಾದ ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು  ಫೋಟೋಗಳಿಗೆ ರಕ್ತಾಭಿಷೇಕ..!

An animal was sacrificed in front of shakti deities, and its blood was offered to the photos of RTI activists Snehamayi Krishna and Gangaraaju in Mysuru.

 

ಮಂಗಳೂರು, ಜ.೩೧, ೨೦೨೫ : ಶಕ್ತಿ ದೇವತೆಗಳ ಮುಂದೆ ಪ್ರಾಣಿ ಬಲಿ ಮಾಡಿ, ಅದರ ರಕ್ತವನ್ನು ಮೈಸೂರಿನ ಆರ್.ಟಿ.ಐ ಕಾರ್ಯಕರ್ತರಾದ ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಅವರ ಫೋಟೋಗಳಿಗೆ ಅರ್ಪಣೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಶ್ರೀರಾಮ ಸೇನೆ ಮುಖಂಡ ಪ್ರಸಾದ್ ಅತ್ತಾವರ ಮೊಬೈಲ್  ನಲ್ಲಿ ಸ್ಫೋಟಕ ಅಂಶ ಬಯಲುಗೊಂಡಿದೆ ಎಂದು ತಿಳಿದು ಬಂದಿದೆ.

ಕಳೆದ ಕೆಲ ದಿನಗಳ ಹಿಂದಷ್ಟೆ “ಮಸಾಜ್ ಪರ್ಲಾರ್” ಒಂದಕ್ಕೆ ಅಕ್ರಮವಾಗಿ ನುಗಿ ದಾಂಧಲೆ ನಡೆಸಿದ್ದ ಆರೋಪದ ಮೇಲೆ ಪ್ರಸಾದ್ ಅತ್ತಾವರ್‌ ಬಂಧನವಾಗಿತ್ತು.  ಈ ವೇಳೆ ಪೊಲೀಸರು ಬಂಧಿತ ಆರೋಪಿಯ ಮೊಬೈಲ್‌ ಫೋನ್‌ ವಶಕ್ಕೆ ಪಡೆದು ಪರಿಶೀಲನೆ ನಡೆಸಿದರು. ಆಗ ಈ ಸ್ಪೋಟಕ ಅಂಶ ಬೆಳಕಿಗೆ ಬಂದಿದೆ.

ಬಂಧಿತ ಪ್ರಸಾದ್‌ ಅತ್ತಾವರ್‌ , ಸರಣಿ ಪ್ರಾಣಿ ಬಲಿ ಮಾಡಿರೋ ವಿಡಿಯೋ  ಆತನ ಮೊಬೈಲ್‌ ಫೋನ್‌ ವಿಡಿಯೋ ಗ್ಯಾಲರಿಯಲ್ಲಿ ಪತ್ತೆಯಾಗಿದೆ.  ಪ್ರಾಣಿ ಬಲಿ ಬಳಿಕ ಆ ರಕ್ತವನ್ನು  ಮೈಸೂರು ಮೂಲದ ಆರ್.ಟಿ.ಐ ಕಾರ್ಯಕರ್ತರಾದ ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಫೋಟೋಗೆ ಅಭಿಷೇಕ ಮಾಡಿದ್ದಾರೆ. ಇದೀಗ ಈ  ವಿಡಿಯೋ ಪೊಲೀಸರ ವಶದಲ್ಲಿದೆ ಎನ್ನಲಾಗಿದೆ.

ರಕ್ತದ ಅಭಿಷೇಕ ಮಾಡುವ ಮೂಲಕ,  ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಡದಿಗೆ ಮಂಜೂರಾಗಿರುವ ಮುಡಾ ನಿವೇಶನಗಳ ವಿರುದ್ಧದ  ಹೋರಾಟದಲ್ಲಿ ಈ ಇಬ್ಬರಿಗೂ ಬಲ ತುಂಬುವ ಉದ್ದೇಶ  ಹೊಂದಿದ್ದರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಈ ಬಗ್ಗೆ ಮಾಹಿತಿ ಪಡೆದ ಪೊಲೀಸರಿಂದ ಇದೀಗ ಮತ್ತೊಂದು ಪ್ರಕರಣ ದಾಖಲು. ಈ ಸಂಬಂದ ಪ್ರಸಾದ್ ಅತ್ತಾವರ್ ಮತ್ತು ಅನಂತ್ ಭಟ್ ವಿರುದ್ಧ  ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್‌ ದಾಖಲಿಸಲಾಗಿದೆ.

key words: RTI activists, Snehamayi Krishna, Gangaraaju, Blood Offered

SUMMARY:

An animal was sacrificed in front of shakti deities, and its blood was offered to the photos of RTI activists Snehamayi Krishna and Gangaraaju in Mysuru.