ಬೆಂಗಳೂರು, ಜನವರಿ,31,2025 (www.justkannada.in): ಫೇಸ್ಬುಕ್ ನಲ್ಲಿ ನಕಲಿ ಅಕೌಂಟ್ ಸೃಷ್ಟಿಸಿ ವಂಚಿಸುತ್ತಿದ್ದ 7 ಆರೋಪಿಗಳನ್ನ ಆಡುಗೋಡಿ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಮುದಾಸೀರ್, ಸೈಯ್ಯದ್ ಡ್ಯಾನಿಶ್, ಶಶಿಕುಮಾರ್, ಕಾಸೀಫ್, ಅಜರುದ್ದೀನ್, ಇಮ್ತಿಯಾಜ್ ಹಾಗೂ ಶಫಿವುಲ್ಲಾ ಷರೀಫ್ ಬಂಧಿತ ಆರೋಪಿಗಳು. ಆರೋಪಿಗಳನ್ನ ಮೈಸೂರಿನ ವಿವಿಧೆಡೆಗಳಲ್ಲಿ ಬಂಧಿಸಲಾಗಿದೆ.
ಬಂಧಿತ 7 ಆರೋಪಿಗಳು ಮೊಹಮ್ಮದ್ ಕಾಶಿಫ್ ಎಂಬುವವರ ಸ್ನೇಹಿತನ ಹೆಸರಿನಲ್ಲಿ ಫೇಸ್ಬುಕ್ ನಕಲಿ ಖಾತೆ ಸೃಷ್ಟಿಸಿದ್ದ ಆರೋಪಿಗಳು 1.50 ಲಕ್ಷ ರೂ ಲಪಟಾಯಿಸಿದ್ದರು. ಈ ಕುರಿತು ಮೊಹಮ್ಮದ್ ಕಾಶಿಫ್ ದೂರು ನೀಡಿದ್ದರು. ಇದೀಗ 7 ಆರೋಪಿಗಳನ್ನ ಬಂಧಿಸಲಾಗಿದೆ.
ಈ ಕುರಿತು ಮಾತನಾಡಿ ಮಾಹಿತಿ ನೀಡಿರುವ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಅವರು, ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಹಣ ವರ್ಗಾವಣೆಯಾದ ಬ್ಯಾಂಕ್ ನ ಮಾಹಿತಿ ಕಲೆ ಹಾಕಿದಾಗ ಮೈಸೂರಿನಲ್ಲಿರುವ ಬ್ಯಾಂಕ್ ವೊಂದರ ಖಾತೆಗೆ ಹಣ ವರ್ಗಾವಣೆಯಾಗಿರುವುದು ತಿಳಿದು ಬಂದಿತ್ತು. ಆರೋಪಿಯನ್ನ ಬಂಧಿಸಿ ವಿಚಾರಣೆಗೊಳಪಡಿಸಿದಾಗ, ಆತ ನೀಡಿದ ಮಾಹಿತಿ ಅನ್ವಯ ಉಳಿದ 6 ಜನ ಆರೋಪಿಗಳನ್ನ ಬಂಧಿಸಲಾಗಿದೆ. ಬಂಧಿತರಿಂದ ಒಟ್ಟು 9 ಮೊಬೈಲ್ ಫೋನ್ಗಳು, 11 ಬ್ಯಾಂಕ್ ಪಾಸ್ಬುಕ್, 6 ಚೆಕ್ ಬುಕ್, 31 ಎಟಿಎಂ ಕಾರ್ಡ್, 9 ಆಧಾರ್ ಕಾರ್ಡ್ಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
Key words: 7 accused,creating, fake accounts, Facebook, arrest