ಮೈಸೂರು, ಜ.೩೧,೨೦೨೫ : ಚಲನಚಿತ್ರ ನಟರಿಗೆ, ರಾಜಕಾರಣಿಗಳಿಗೆ ಫ್ಯಾನ್ ಫಾಲೋಯರ್ಸ್ ಇರೋದು ಸಹಜ. ಆದರೆ ವಿಜ್ಞಾನ ಕ್ಷೇತ್ರದ ಪ್ರತಿಭಾವಂತರು ಹಾಗೂ ರಾಜ್ಯದ ಎರಡು ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳ ಕುಲಪತಿ ಹುದ್ದೆ ನಿರ್ವಹಿಸಿದವರಿಗೂ ಅಭಿಮಾನಿ ಬಳಗ ಇದೆ ಅಂದ್ರೆ ನೀವು ನಂಬಲೇ ಬೇಕು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಹಾಗೂ ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ಖ್ಯಾತ ರಸಾಯನಶಾಸ್ತ್ರಜ್ಞ ಪ್ರೊ. ಕೆ.ಎಸ್. ರಂಗಪ್ಪ ಅವರೆ ಅಭಿಮಾನಿ ಬಳಗ ಹೊಂದಿರುವ ವಿಜ್ಞಾನಿ.
ಪ್ರೊ. ರಂಗಪ್ಪ ಅವರ ಅಭಿಮಾನಿ ಬಳಕ್ಕೆ ಈಗ ಒಂಬತ್ತು ವರ್ಷ. ಮೈಸೂರು ವಿವಿ ಬೋಧಕೇತರ ವಿಭಾಗದ ಎಂ. ಶ್ರೀನಿವಾಸ್ ಎಂಬುವವರೇ ಇವರ ಅಧ್ಯಕ್ಷರು. ಇವರನ್ನು “ ಜಸ್ಟ್ ಕನ್ನಡ” ಮಾತನಾಡಿಸಿದಾಗ, ಅಭಿಮಾನಿ ಬಳಗದ ಮೂಲಕ ಶೋಷಿತ ವರ್ಗದ, ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಮಸ್ಯೆ ಎದುರಾದಲ್ಲಿ ಅವರ ನೆರವಿಗೆ ಧಾವಿಸುವ ಸದುದ್ದೇಶದಿಂದ ಬಳಗ ಅಸ್ಥಿತ್ವಕ್ಕೆ ಬಂತು ಎಂದರು. ಕಳೆದ ೮ ವರ್ಷಗಳಿಂದ ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ಬಳಗ ಮಾಡುತ್ತಿದ್ದು ಈಗ ಒಂಬತ್ತನೇ ವರ್ಷಕ್ಕೆ ಕಾಲಿಟ್ಟಿದೆ. ಬಳಗದಲ್ಲಿ ವಿದ್ಯಾರ್ಥಿಗಳು, ಸಂಶೋಧಕರು, ಪ್ರಾಧ್ಯಾಕರಿದ್ದು ಇವರೆಲ್ಲಾಸಂಘದ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಸ್ಮರಿಸಿಕೊಂಡರು.
ಪ್ರೊ.ಶ್ರೀಕಂಠಸ್ವಾಮಿ ಅವರು ಮಾತನಾಡಿ, ರಾಜಶ್ರೀ ನಾಲ್ವಡಿ ಅವರು ಮೈಸೂರು ವಿವಿ ಸ್ಥಾಪಕರು. ಅವರು ಕಟ್ಟಿದ ಈ ಪ್ರತಿಷ್ಠಿತ ವಿಶ್ವವಿದ್ಯಾನಿಲಯದ ನೂರನೇ ವರ್ಷದ ಸಂಭ್ರಮದ ವೇಳೆ ಪ್ರೊ.ಕೆ.ಎಸ್.ರಂಗಪ್ಪ ಅವರು ಕುಲಪತಿಗಳಾಗಿ ನೆನಪಿನಲ್ಲಿ ಉಳಿಯುವಂತೆ ಕಾರ್ಯಕ್ರಮಗಳನ್ನು ರೂಪಿಸಿದರು. ಈ ಅವಧಿಯಲ್ಲಿ ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಪ್ರಧಾನಿ, ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿಗಳನ್ನು ಮೈಸೂರು ವಿವಿಗೆ ಆಹ್ವಾನಿಸಿದ್ದರು. ಜತೆಗೆ ೧೨ ಮಂದಿ ನೊಬೆಲ್ ಪ್ರಶಸ್ತಿ ಪುರಸ್ಕೃತರು ಸಮಾರಂಭದಲ್ಲಿ ಭಾಗವಹಿಸಿ ಯುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದು ವಿಶೇಷ.
ಪ್ರಮುಖ ಸಾಧನೆಗಳು :
ವಿಶ್ವದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ:
ಅಮೆರಿಕಾದ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯವು ಪ್ರಕಟಿಸಿದ ವಿಶ್ವದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಪ್ರೊ. ರಂಗಪ್ಪ ಅವರು 2,181ನೇ ಸ್ಥಾನವನ್ನು ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ಶೇ.2 ರಷ್ಟು ವಿಜ್ಞಾನಿಗಳು ಸ್ಥಾನ ಪಡೆದಿದ್ದು, ಪ್ರೊ. ರಂಗಪ್ಪ ಅವರು ಸಾವಯವ ರಸಾಯನಶಾಸ್ತ್ರ ವಿಭಾಗದಲ್ಲಿ ಗುರುತಿಸಲ್ಪಟ್ಟಿದ್ದಾರೆ. ಹೀಗಾಗಿ ವಿಶ್ವದ ಯಾವುದೇ ಪ್ರತಿಷ್ಠಿತ ಪ್ರಯೋಗಾಲಯಗಳಿಗೆ ಬೇಕಾದರು ಅವರು ಭೇಟಿ ನೀಡಬಹುದಾಗಿದೆ.
ಅಂತರರಾಷ್ಟ್ರೀಯ ಸಂಶೋಧನಾ ಪ್ರಬಂಧಗಳು:
ಪ್ರೊ. ರಂಗಪ್ಪ ಅವರು ೭00ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ, ಜತೆಗೆ ೧೫,೦೦೦ ಸೈಟೇಷನ್ಸ್ ಹಾಗೂ ೬೫ “ ಹೆಚ್ “ ಇಂಡೆಕ್ಸ್ ಗಳನ್ನು ಹೊಂದಿರುವುದು ಇವರ ದಾಖಲೆ. ೭೦ ಜನ ವಿದ್ಯಾರ್ಥಿಗಳಿಗೆ ಪಿಎಚ್ಡಿ ಮಾರ್ಗದರ್ಶಕರಾಗಿ ಯಶಗಳಿಸಿದ್ದಾರೆ. ಇದು ಅವರ ವೈಜ್ಞಾನಿಕ ಸಾಧನೆಯ ಮಹತ್ವವನ್ನು ತೋರಿಸುತ್ತದೆ.
ಸಂಶೋಧನಾ ಪೇಟೆಂಟ್ಗಳು:
ಅವರು ೧೪ ವಿಭಿನ್ನ ಸಂಶೋಧನಾ ಪೇಟೆಂಟ್ಗಳನ್ನು ಪಡೆದಿದ್ದಾರೆ, ಇದು ಅವರ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವಪೂರ್ಣ ಕೊಡುಗೆಗಳನ್ನು ಸೂಚಿಸುತ್ತದೆ.
ಮಾಲಿಕ್ಯುಲರ್ ಕೆಮಿಸ್ಟ್ರಿಯಲ್ಲಿ ಸಂಶೋಧನೆ:
ಮಾಲಿಕ್ಯುಲರ್ ಕೆಮಿಸ್ಟ್ರಿಯಲ್ಲಿನ ಅವರ ಅನೇಕ ಸಂಶೋಧನೆಗಳು ಚೀನಾ ಮತ್ತು ಸಿಂಗಾಪುರದಲ್ಲಿ ವೈದ್ಯಕೀಯ ಪ್ರಯೋಗ ಹಂತದಲ್ಲಿವೆ, ಇದು ಅವರ ಸಂಶೋಧನೆಗಳ ಪ್ರಾಯೋಗಿಕ ಮಹತ್ವವನ್ನು ತೋರಿಸುತ್ತದೆ.
ವಿಶ್ವಾದ್ಯಾಂತ ಸಂಶೋಧಕರೊಂದಿಗೆ ಸಹಭಾಗಿತ್ವ:
ವಿವಿಧ ದೇಶಗಳ 350ರಿಂದ 400 ಮಂದಿ ಸಂಶೋಧಕರು ಪ್ರೊ. ರಂಗಪ್ಪ ಅವರೊಂದಿಗೆ ಸಂಶೋಧನೆ ನಡೆಸುತ್ತಿದ್ದಾರೆ, ಇದು ಅವರ ವೈಜ್ಞಾನಿಕ ನೆಟ್ವರ್ಕ್ನ ವ್ಯಾಪ್ತಿಯನ್ನು ಸೂಚಿಸುತ್ತದೆ.
ಯುನೆಸ್ಕೋ ಫೆಲೋಶಿಪ್:
ಪ್ರೊ. ರಂಗಪ್ಪ ಅವರು UNESCO FELLOW OF THE WORLD ACADEMY OF SCIENCES ಫೆಲೋಶಿಪ್ಗೆ ಆಯ್ಕೆಯಾಗಿದ್ದಾರೆ, ಇದು ಅವರ ವೈಜ್ಞಾನಿಕ ಸಾಧನೆಗಳಿಗೆ ಅಂತಾರಾಷ್ಟ್ರೀಯ ಮಾನ್ಯತೆಯನ್ನು ನೀಡುತ್ತದೆ.
ಪ್ರೊ. ಕೆ.ಎಸ್. ರಂಗಪ್ಪ ಅವರ ವೈಜ್ಞಾನಿಕ ಸಾಧನೆಗಳು ದೇಶ-ವಿದೇಶಗಳಲ್ಲಿ ಪ್ರಶಂಸೆಗೆ ಪಾತ್ರವಾಗಿವೆ, ಮತ್ತು ಅವರು ವಿಜ್ಞಾನ ಕ್ಷೇತ್ರದಲ್ಲಿ ಮಹತ್ವಪೂರ್ಣ ಕೊಡುಗೆಗಳನ್ನು ನೀಡಿದ್ದಾರೆ.
key words: Former vice-chancellor, “fan club”, mysore, rangappa.k.s, KSOU, UOM
ENGLISH SUMMARY:
Prof. K.S. Rangappa, a distinguished chemist and academician, has made significant contributions to the fields of bio-organic and medicinal chemistry. He has synthesized over 7,000 small molecules, some of which have demonstrated promising anti-cancer properties in preclinical models.
His research has led to the development of compounds such as DMBO and NPB, which are commercially available as standard inhibitors of growth factors and the BAD protein, respectively. Additionally, he has discovered pharmacological inhibitors targeting proteins like STAT3, NF-κB, TFF3, and human methionyl tRNA synthetases, all of which are implicated in various cancers.
Prof. Rangappa’s academic journey includes a B.Sc. (1976), M.Sc. (1978), and Ph.D. (1982) from the University of Mysore. He was awarded a D.Sc. degree by thesis in 1998 for his independent research contributions in physical-organic chemistry. His post-doctoral research was conducted at the University of Saskatchewan, Canada.