ದಾರಿ ಬಿಡಲಿಲ್ಲ ಅಂತಾ ಗೂಡ್ಸ್ ವಾಹನ ಚಾಲಕನ ಮೇಲೆ ಹಲ್ಲೆ: ಗಂಭೀರ ಗಾಯ

ಚಾಮರಾಜನಗರ,ಫೆಬ್ರವರಿ,1,2025 (www.justkannada.in): ದಾರಿ ಬಿಡಲಿಲ್ಲ ಎಂದು ಗೂಡ್ಸ್ ವಾಹನ ಚಾಲಕನ ಮೇಲೆ ಕಾರು ಚಾಲಕ‌ ಹಲ್ಲೆ ನಡೆಸಿದ ಘಟನೆ  ಗುಂಡ್ಲುಪೇಟೆ ತಾಲೂಕಿನ ಕನ್ನೇಗಾಲ ಗ್ರಾಮದ ಬಳಿ  ನಡೆದಿದೆ.

ಶ್ಯಾನಡ್ರಹಳ್ಳಿ ಗ್ರಾಮದ ಗೂಡ್ಸ್ ಚಾಲಕ ನಿಂಗರಾಜು ಹಲ್ಲೆಗೊಳಗಾದವರು. ಕನ್ನೇಗಾಲ ಗ್ರಾಮದ ಕಾರು ಚಾಲಕ ಚೇತನ್ ಎಂಬಾತನೇ ಟೂಲ್ ಸ್ಪ್ಯಾನರ್ ನಿಂದ ಹಲ್ಲೆ ನಡೆಸಿದ್ದು,  ಗೂಡ್ಸ್ ಚಾಲಕನ ತಲೆಯಲ್ಲಿ ಭಾರಿ ರಕ್ತ ಸ್ರಾವವಾಗಿ ಗಂಭೀರ ಗಾಯಗಳಾಗಿದೆ.

ಬಾಳೆಕಾಯಿ ತುಂಬಿಕೊಂಡು  ಗೂಡ್ಸ್ ವಾಹನ ತೆರಳುತ್ತಿದ್ದಾಗ ಸೈಡ್ ಕೊಡು ಎಂದು ಕಾರು ಚಾಲಕ ಚೇತನ್ ಗಲಾಟೆ ತೆಗೆದು ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.  ಈ ಸಂಬಂಧ ಗಾಯಾಳು ನಿಂಗರಾಜು  ಅಣ್ಣ ದೂರು ದಾಖಲಿಸಿದ್ದು,  ಅವಾಚ್ಯ ಶಬ್ದಗಳಿಂದ ನಿಂದನೆ, ಹಲ್ಲೆ, ಜಾತಿ ನಿಂದನೆ ಆರೋಪದ ಮೇಲೆ ಕಾರು ಚಾಲಕನ ಮೇಲೆ ಗುಂಡ್ಲುಪೇಟೆ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಗಾಯಾಳು ನಿಂಗರಾಜುಗೆ ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,  ತಲೆಮರೆಸಿಕೊಂಡಿರುವ ಆರೋಪಿ ಚೇತನ್ ಬಂಧನಕ್ಕೆ ಪೋಲಿಸರು ಬಲೆ ಬೀಸಿದ್ದಾರೆ.

Key words: Chamarajanagar, assult, Goods vehicle, driver, Serious injury