ಮೈಸೂರು,ಫೆಬ್ರವರಿ,1,2025 (www.justkannada.in): ಇಂದು ಮಂಡಿಸಿದ ಕೇಂದ್ರ ಬಜೆಟ್ ದೂರದೃಷ್ಠಿ ಇಲ್ಲದ, ದೇಶದ ಹಿತದೃಷ್ಠಿಯಿಂದ ಕರ್ನಾಟಕದ ಹಿತದೃಷ್ಠಿಯಿಂದ ಬಹಳ ನಿರಾಶಾದಾಯಕ ಬಜೆಟ್ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು.
ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಕೇಂದ್ರ ಬಜೆಟ್ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು
ಈ ಬಾರಿಯ ಬಜೆಟ್ ಮುಖ್ಯಾಂಶಗಳನ್ನ ಗಮನಿಸಿದ್ದೇನೆ. 2025-26 ನೇ ಸಾಲಿನ ಕೇಂದ್ರಬಜೆಟ್ ದೇಶದ ಹಿತದೃಷ್ಠಿಯಿಂದ, ಕರ್ನಾಟಕದ ಹಿತದೃಷ್ಠಿಯಿಂದ ಬಹಳ ನಿರಾಶಾದಾಯಕ ಬಜೆಟ್. ದೂರದೃಷ್ಠಿ ಇಲ್ಲದೇ ಇರುವ ಬಜೆಟ್. ಬಜೆಟ್ ಪೂರ್ವಭಾವಿ ಸಭೆಗೆ ಕರೆದಿದ್ದರು. ರಾಜ್ಯದಿಂದ ಕೃಷ್ಣಭೈರೇಗೌಡ ಭೇಟಿ ನೀಡಿದ್ದರು. ನಾವು ರಾಜ್ಯದಿಂದ ಹಲವು ಬೇಡಿಕೆ ಇಟ್ಡಿದ್ದೆವು. ರಾಜ್ಯ ಸರ್ಕಾರದ ಬೇಡಿಕೆಗಳು ಕೇವಲ ಬೇಡಿಕೆಗಳಾಗಿವೆ. ಒಂದೇ ಒಂದು ಬೇಡಿಕೆಯನ್ನು ಕೇಂದ್ರ ಈಡೇರಿಸಿಲ್ಲ. 50 ಲಕ್ಷದ 65 ಸಾವಿರದ 345 ಕೋಟಿ ರೂ ಬಜೆಟ್ ಮಂಡಿಸಿದ್ದಾರೆ. ಕಳೆದ ವರ್ಷ 48 ಲಕ್ಷದ 20 ಸಾವಿರ ಕೋಟಿ ಬಜೆಟ್ ಎಂದರು.
ಹೆಚ್ಚು ತೆರಿಗೆ ಕೊಡುವ ರಾಜ್ಯಗಳಲ್ಲಿ ಕರ್ನಾಟಕ ನಂ.2. ಆದರೆ ಬಿಹಾರ್ , ಆಂದ್ರಪ್ರದೇಶ ಹೆಚ್ಚು ಹಣ ಬಿಡುಗಡೆ ಮಾಡಲಾಗಿದೆ. ಬಿಹಾರ್ ರಾಜ್ಯದಲ್ಲಿ ಚುನಾವಣೆ ಕಾರಣಕ್ಕೆ ಹೆಚ್ಚು ಹಣ ಬಿಡುಗಡೆ. ಆಂಧ್ರಕ್ಕೆ ಹೆಚ್ಚು ಅನುದಾನ ನೀಡಿರುವ ಬಜೆಟ್ ಇದಗಿದೆ. ರಾಜ್ಯದ ಮೇಕೆದಾಟು ಯೋಜನೆ, ಕೃಷ್ಣಾ ಯೋಜನೆ ಸೇರಿ ಯಾವ ಯೋಜನೆಗೂ ಹಣ ನೀಡಿಲ್ಲ. 2023-24 ರ ಬಜೆಟ್ ನಲ್ಲಿ ಅಪ್ಪರ್ ಭದ್ರಾ ಪ್ರಾಜೆಕ್ಟ್‌ಗೆ 5300 ಕೋಟಿ ಹಣ ನೀಡುವುದಾಗಿ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು. ಈವರಗೆ ಒಂದೇ ಒಂದು ರೂಪಾಯಿ ನೀಡಿಲ್ಲ. ಈ ಬಜೆಟ್ ನಲ್ಲಿ ಅದರ ಪ್ರಸ್ತಾಪವೂ ಆಗಿಲ್ಲ. ರಾಷ್ಟ್ರೀಯ ಯೋಜನೆ ಮಾಡುತ್ತೇವೆ ಎಂದ ವಿಷಯ ಕೂಡ ಪ್ರಸ್ತಾಪ ಆಗಿಲ್ಲ. ಕರ್ನಾಟಕವು ರಾಜಸ್ತಾನ ಬಿಟ್ಟರೆ ಹೆಚ್ಚು ಒಣಭೂಮಿ ಇರುವ ರಾಜ್ಯ. ನೀರಾವರಿ ಯೋಜನೆಗೆ ಬಜೆಟ್ ನಲ್ಲಿ ಅನುದಾನ ನೀಡಿಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ನೀರಾವರಿ ಯೋಜನೆಗಳ ಪ್ರಸ್ತಾಪವಿಲ್ಲ. ರಾಯಚೂರಿನಲ್ಲಿ ಏಮ್ಸ್ ಘೋಷಣೆ ಮಾಡುವ ನಿರೀಕ್ಷೆ ಮಾಡಿದ್ದೆ. ಕೇಂದ್ರ ಸಚಿವ ನಡ್ಡಾ ಅವರು ಭರವಸೆ ನೀಡಿದ್ದರು. ಅದರ ಪ್ರಸ್ತಾಪವೂ ಕೂಡ ಇಲ್ಲ. ರಾಜ್ಯದ ನಗರಗಳಲ್ಲಿ ಕುಡಿಯುವ ನೀರಿನ ಯೋಜನೆ, ಗ್ರಾಮೀಣ ಪ್ರದೇಶ , ರೈಲು ಹೆದ್ದಾರಿಗಳಿಗೆ ಹಣ ಒದಗಿಸಿಕೊಡುವಂತೆ ಕೇಳಿದ್ದೆವುಅದನ್ನ ಸಂಪೂರ್ಣವಾಗಿ ತಿರಸ್ಕಾರ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರಲ್ಲಿ ವಿಶೇಷ ಕಾರಿಡಾರ್ ಯೋಜನೆಗೆ ಕೊಟ್ಟಿದ್ದು ಖಾಲಿ ಚೆಂಬು. ಅಂಗನವಾಡಿ, ಆಶಾ ಕಾರ್ಯಕರ್ತರಿಗೆ ಗೌರವ ಧನ ಕೂಡ ಹೆಚ್ಚಿಸಿಲ್ಲ. ಕೇಂದ್ರ ಸರ್ಕಾರದ ಯೋಜನೆಯಾದರೂ ಒಂದೇ ಒಂದು ರೂ. ನೀಡಿಲ್ಲ. ನಗರ ಪ್ರದೇಶದ ವಸತಿ ಯೋಜನೆಯನ್ನ 5 ಲಕ್ಷಕ್ಕೆ ಹೆಚ್ಚಿಸುವಂತೆ ಕೇಳಿದ್ದೆವು. ಗ್ರಾಮೀಣ ಪ್ರದೇಶದ ಹಣವನ್ನ 75 ಸಾವಿರದಿಂದ ಮೂರು ಲಕ್ಷಕ್ಕೆ ಹೆಚ್ಚಿಸುವಂತೆ ಕೇಳಿದ್ದೆವು. ಅದುಯಾವುದನ್ನೂ ಕೂಡ ಕೇಂದ್ರ ಬಜೆಟ್ ಮಾಡಿಲ್ಲ ಈ ಬಾರಿಯ ನರೇಂದ್ರ ಮೋದಿ ಬಜೆಟ್ ಚೊಂಬು ಕೊಡುವ ಕೆಲಸ ಮಾಡಿದೆ ಎಂದು ವ್ಯಂಗ್ಯವಾಡಿದರು.
ನಾವು ಈ ಬಜೆಟ್ ನಲ್ಲಿ ಅನೇಕ ಬೇಡಿಕೆ ಇಟ್ಟಿದ್ದೆವು. ನಮ್ಮ ಬೇಡಿಕೆಗಳು ಬೇಡಿಕೆಗಳಾಗಿಯೇ ಉಳಿದಿವೆ. ಒಂದನ್ನು ಈಡೇರಿಸುವ ಕೆಲಸ ಕೇಂದ್ರ ಸರ್ಕಾರ ಮಾಡಿಲ್ಲ. ಈ ಬಜೆಟ್ ಗಾತ್ರದಲ್ಲಿ 50ಲಕ್ಷದ 65ಸಾವಿರ ಕೋಟಿ 365ಕೋಟಿ . ಕೇಂದ್ರ ಸರ್ಕಾರ ಸಾಲ ಮಾಡಿರುವಂತದ್ದು 15 ಲಕ್ಷದ 68 ಸಾವಿರದ 936 ಕೋಟಿ. ಬಡ್ಡಿ ಪಾವತಿಗೆ 12ಲಕ್ಷದ 76ಸಾವಿರ ಕೋಟಿ. ಈ ದೇಶದ ಸಾಲ 202 ಲಕ್ಷದಿಂದ 205 ಲಕ್ಷ ಕೋಟಿಯಷ್ಟಿದೆ. ಒಟ್ಟಾರೆಯಾಗಿ ಈ ಬಜೆಟ್ ಅತ್ಯಂತ್ಯ ನಿರಾಸಾದಾಯಕ ಕರ್ನಾಟಕಕ್ಕೆ ವಿರುದ್ದವಾಗಿರುವಂತಹ ಬಜೆಟ್ ಎಂದರು.
2023-24ನೆ ಬಜೆಟ್ ನಲ್ಲಿ ಭದ್ರ ಮೇಲ್ದಂಡೆ ಯೋಜನೆಗೆ 5300ಕೋಟಿ ಅನುದಾನ ಘೋಷಣೆ ಮಾಡಿದರು. ಬಸವರಾಜ್ ಬೊಮ್ಮಾಯಿ ಬಜೆಟ್ ಮಂಡಿಸುವಾಗ. ನ್ಯಾಷನಲ್ ಪ್ರಾಜೆಕ್ಟ್ ಮಾಡ್ತೀವಿ ಎಂದಿದ್ದರು. ಅದು ಕೂಡ ಪ್ರಸ್ತಾಪ ಮಾಡಿಲ್ಲ. ವಸತಿ ಯೋಜನೆಗಳಿಗೆ ಕೇಂದ್ರ ಸರ್ಕಾರ 1.5ಲಕ್ಷ ಕೊಡ್ತಾರೆ. ಅದನ್ನ ಐದು ಲಕ್ಷಕ್ಕೆ ಏರಿಕೆ ಮಾಡುವಂತೆ ಕೇಳಿದ್ವಿ ಮಾಡಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಮನೆ ನಿರ್ಮಾಣಕ್ಕೆ ಮೂರು ಲಕ್ಷದವರೆಗೆ ಏರಿಕೆ ಮಾಡುವಂತೆ ಕೇಳಿದ್ದವು. ಆದರೆ ಯಾವುದನ್ನೂ ಮಾಡಿಲ್ಲ ಎಂದರು
ನರೇಗಾ ಯೋಜನೆಯ ಹಣ ಕೂಡ ಕಡಿಮೆಯಾಗಿದೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಕೂಡ ನಿರೀಕ್ಷೆ ಮೀರಿ ಪ್ರಯೋಜನಕ್ಕೆ ಬಂದಿಲ್ಲ. ಎಸ್‌ಸಿ/ಎಸ್ ಟಿ ವಿದ್ಯಾರ್ಥಿ ವೇತನ ಹೆಚ್ಚಿಸಿಲ್ಲ. ರೈತರಿಗೆ ನೀಡುವ ಬೆಳೆ ವಿಮೆ ಕಡಿಮೆ ಮಾಡಿದ್ದಾರೆ. ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ, ಸಬ್ ಕ ಸಾಥ್, ಸಬ್ ಕಾ ವಿಕಾಸ್ ಬಗ್ಗೆ ಜಾಸ್ತಿ ಮಾತನಾಡುತ್ತಾರೆ. ಮೇಕ್ ಇನ್ ಇಂಡಿಯಾಗೆ ಇಟ್ಟಿರುವುದು ಕೇವಲ ನೂರು ಕೋಟಿ. ಈ ಬಜೆಟ್ ಕೇವಲ ಬಾಯಿ ಮಾತಲ್ಲಿ ಹೊಟ್ಟೆ ತುಂಬಿಸುವ ಬಜೆಟ್. ಕೃಷಿ ಕ್ಷೇತ್ರಕ್ಕೆ ದೊಡ್ಡ ಯೋಜನೆ ಕೊಡುತ್ತೇನೆ ಎಂಬ ಭರವಸೆ ಹುಸಿಯಾಗಿದೆ. ಬಜೆಟ್ ನಲ್ಲಿ ಅದರ ಗಾತ್ರವನ್ನು ಕಡಿಮೆ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.
ಬಡವರ ಆಹಾರ ಖಾತ್ರಿ ಯೋಜನೆಗೆ 2024-25 ರಲ್ಲಿ 2 ಲಕ್ಷದ 6 ಸಾವಿರ ಕೋಟಿ. 2025-26 ನೇ ಸಾಲಿಗೆ 2 ಲಕ್ಷದ 3 ಸಾವಿರ ಕೋಟಿ. ಈ ಬಾರಿ ಆಹಾರ ಭದ್ರತೆಗೆ ಕಡಿಮೆ ಮಾಡಿದ್ದಾರೆ. ಈ ಬಜೆಟ್ ನಲ್ಲಿ ಬಡವರು ,ಕಾರ್ಮಿಕರು ,ಯುವಕರು ,ಮಹಿಳೆಯರ ಅಭಿವೃದ್ಧಿಗೆ ಖರ್ಚು ಮಾಡಿಲ್ಲ. ಕಾರ್ಪೊರೆಟ್ ಬಾಡಿಗಳಿಗೆ ಹೆಚ್ವು ಅನುಕೂಲ ಮಾಡಿಕೊಟ್ಟಿದ್ದಾರೆ. ಟೆಲಿಕಾಂ ಉದ್ಯಮಿಗಳಿಗೆ 2 ಸಾವಿರ ಕೋಟಿಯಿಂದ 24 ಸಾವಿರ ಕೋಟಿ ಹಣ ಇಟ್ಟಿದ್ದಾರೆ. ಬಿಹಾರ ಚುನಾವಣೆ ಹಿನ್ನೆಲೆ ಮೂರು- ನಾಲ್ಕು ಬಾರಿ ಪ್ರಸ್ತಾಪ ಮಾಡಿದ್ದಾರೆ. ಬಜೆಟ್ ನಲ್ಲಿ ನಮಗೆ ಘೋಷಣೆ ಮಾಡಿ ಚೊಂಬು ನೀಡಿದ್ರು. ಅದೇ ರೀತಿ ಬಿಹಾರಕ್ಕೂ ಚೊಂಬು ಕೊಡ್ತಾರೆ ಎಂದು ಲೇವಡಿ ಮಾಡಿದರು.
Key words: Shortsighted, Disappointing, budget, CM Siddaramaiah