ನಾನು ಶೀಘ್ರವೇ ಆರ್.ಅಶೋಕ್ ಬಳಿ ಜೋತಿಷ್ಯ ಕೇಳ್ತೇನೆ- ಡಿಸಿಎಂ ಡಿಕೆ ಶಿವಕುಮಾರ್ ವ್ಯಂಗ್ಯ

ಬೆಂಗಳೂರು,ಫೆಬ್ರವರಿ,3,2025 (www.justkannada.in): ನವೆಂಬರ್ ನಲ್ಲಿ ಸಿಎಂ ಬದಲಾವಣೆಯಾಗುತ್ತಾರೆ ಎಂದು ಹೇಳಿಕೆ ನೀಡಿದ್ದ ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ಡಿಸಿಎಂ ಡಿಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.

ಈ ಕುರಿತು ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್,  ನನಗೂ  ಜ್ಯೋತಿಷ್ಯ  ಬಗ್ಗೆ ಗೊತ್ತಿದೆ. ಆರ್ ಅಶೋಕ್ ಅವರು ಬೋರ್ಡ್ ಯಾವಾಗ ಹಾಕಿಕೊಂಡರೋ ಗೊತ್ತಿಲ್ಲ.  ನಾನು ಶೀಘ್ರವೇ ಅಶೋಕ್ ಬಳಿ ಜೋತಿಷ್ಯ ಕೇಳುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.

ನಾಲ್ಕೈದು ಜೆಡಿಎಸ್ ಶಾಸಕರು ಡಿಕೆಶಿ ಸಂಪರ್ಕದಲ್ಲಿದ್ದಾರೆಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಅದೆಲ್ಲವೂ ಫೇಕ್ . ನಾನು ಯಾವ ಜೆಡಿಎಸ್ ಶಾಸಕರ ಜೊತೆ ಮಾತನಾಡಿಲ್ಲ ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರಿಗೆ ನೋವಿದೆ. ಎಷ್ಟು ದಿನ ಅಂತಾ ಕಾಯ್ತಾರೆ.  ನಾನು ಯಾರನ್ನೂ ಸಂಪರ್ಕಿಸಿಲ್ಲ ಜೆಡಿಎಸ್ ಕಾರ್ಯಕರ್ತರಿಗೆ ರಾಷ್ಟ್ರಿಯ ಪಕ್ಷಕ್ಕೆ ಸೇರಿಕೊಳ್ಳುವ ಆಸೆ ಇದೆ.  ಅದಕ್ಕೆ ಪಕ್ಷಕ್ಕೆ ಬನ್ನಿ ಸೇರಿಸಿಕೊಳ್ಳಿ ಎಂದಿದ್ದೇನೆ ಎಂದರು.

Key words: R. Ashok, astrology, DCM, DK Shivakumar