ಕಿವಿ ಚುಚ್ಚಿಸಲು ಆಸ್ಪತ್ರೆಗೆ ಕರೆತಂದಿದ್ದ ಮಗು ಸಾವು: ವೈದ್ಯರ ವಿರುದ್ದ ಆಕ್ರೋಶ

ಚಾಮರಾಜನಗರ,ಫೆಬ್ರವರಿ,3,2025 (www.justkannada.in): ಕಿವಿ ಚುಚ್ಚಿಸಲು ಆಸ್ಪತ್ರೆಗೆ ಕರೆತಂದ ಮಗು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

ಹಂಗಳಾ ಗ್ರಾಮದ ಆನಂದ್ ಮತ್ತು ಮಾನಸ ದಂಪತಿಯ ಪ್ರತೀಕ್ಷ ಎಂಬ ಆರು ತಿಂಗಳ ಮಗು ಸಾವನ್ನಪ್ಪಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ವೈದ ಡಾ.ನಾಗರಾಜು ಕಿವಿ ಚುಚ್ಚಲು ಕಿವಿ ಬಳಿ ಅನಸ್ತೇಷಿಯಾ ಇಂಜೆಕ್ಷನ್ ನೀಡಿದ್ದರು. ಈ ವೇಳೆ ಓವರ್ ಡೋಸ್ ನಿಂದ ಸಾವಾಗಿದೆ ಎಂದು ಪೋಷಕರ ಆರೋಪಿಸಿದ್ದಾರೆ.

ಮಗುವನ್ನು ತಕ್ಷಣ ಗುಂಡ್ಲುಪೇಟೆ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಅಷ್ಟರಲ್ಲಾಗಲೇ  ಮಗು ಪ್ರತೀಕ್ಷಾ ಸಾವನ್ನಪ್ಪಿದೆ.  ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು,  ವೈದ್ಯರ ವಿರುದ್ದ ಪ್ರಕರಣ ದಾಖಲಿಸಲು ಪೋಷಕರು ಮುಂದಾಗಿದ್ದಾರೆ. ಸ್ಥಳಕ್ಕೆ ಗುಂಡ್ಲುಪೇಟೆ ಠಾಣಾ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: ear piercing, baby,  dies, hospital